

ನೆಲ್ಯಾಡಿ: ಹಿರೆಬಂಡಾಡಿ ಸರಕಾರಿ ಹೈಸ್ಕೂಲಿನಲ್ಲಿ ಅ.24 ಮತ್ತು 25ರಂದು ನಡೆದ ವಲಯಮಟ್ಟದ ಕ್ರೀಡಾಕೂಟದಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಅದ್ಭುತ ಪ್ರದರ್ಶನ ನೀಡುತ್ತಾ 14 ಹಾಗೂ 17ರ ಎರಡು ವಯೋಮಾನದ ವಿಭಾಗಗಳಲ್ಲಿ ಓವರ್ ಆಲ್ ಚಾಂಪಿಯನ್ ಶಿಪ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
17ರ ವಯೋಮಾನದ ವಿಭಾಗದಲ್ಲಿ ಸಂಸ್ಥೆಯ ವಿದ್ಯಾರ್ಥಿ ಅಕ್ಷಯ್ 100 ಮತ್ತು 200 ಮೀಟರ್ ಓಟಗಳಲ್ಲಿ ಪ್ರಥಮ ಸ್ಥಾನ ಹಾಗೂ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಶಿಪ್ ಪಟ್ಟವನ್ನು ಗಳಿಸಿದರು. 4×400 ಮೀಟರ್ ರೀಲೆಯಲ್ಲೂ ಸಂಸ್ಥೆಯ ತಂಡವು ತೃತೀಯ ಸ್ಥಾನ ಪಡೆದುಕೊಂಡಿತು. ಅರೋನ್ 3000 ಮೀಟರ್ ಹಾಗೂ 1500 ಮೀಟರ್ ಓಟಗಳಲ್ಲಿ ಪ್ರಥಮ ಸ್ಥಾನ, 800 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದು ಶ್ರೇಷ್ಠತೆ ಮೆರೆದರು. ಶೋಹನ್ ಜಿಜನ್ ಶಾಟ್ ಪುಟ್‌ನಲ್ಲಿ ಪ್ರಥಮ, ಶಫಿಯುಲ್ಲಾ 3000 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ತಂಡದ ಯಶಸ್ಸಿಗೆ ಮಹತ್ವದ ಪಾತ್ರವಹಿಸಿದರು. ಈ ವಿಭಾಗದಲ್ಲಿ ಸಂಸ್ಥೆ ಓವರ್ ಆಲ್ ಚಾಂಪಿಯನ್ ಶಿಪ್ ಗೌರವಕ್ಕೆ ಭಾಜನವಾಗಿದೆ.
14ರ ವಯೋಮಾನದ ಬಾಲಕರ ವಿಭಾಗದಲ್ಲಿ ಅಲೆನ್ ಪ್ರದೀಪ್ 200 ಮೀಟರ್ ಓಟದಲ್ಲಿ ಪ್ರಥಮ, 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಹಾಗೂ 4×100 ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದರು. ಕೌಶಿಕ್ 400 ಮತ್ತು 600 ಮೀಟರ್ ಓಟಗಳಲ್ಲಿ ದ್ವಿತೀಯ ಸ್ಥಾನ ಪಡೆದು 4×100 ರೀಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ಮಹಮ್ಮದ್ ರಿಷನ್, ವಿದ್ವತ್, ಜೋಯಲ್ ಮೋನಿಷಾ ಮೊದಲಾದವರು ತಂಡದ ಯಶಸ್ಸಿಗೆ ಕೈಜೋಡಿಸಿದರು. ಜೋಯಲ್ ಮೋನಿಷಾ ಹೈ ಜಂಪ್‌ನಲ್ಲಿ ತೃತೀಯ ಸ್ಥಾನ ಪಡೆದು ಶ್ರೇಷ್ಠತೆ ತೋರಿದರು. ಈ ವಿಭಾಗದಲ್ಲಿಯೂ ಸಂಸ್ಥೆ ಓವರ್ ಆಲ್ ಚಾಂಪಿಯನ್ ಶಿಪ್ ಗೆ ಪಾತ್ರವಾಯಿತು.
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅರ್ಚನಾ ತ್ರಿಪಲ್ ಜಂಪ್ ಹಾಗೂ ಹೈ ಜಂಪ್ ಎರಡರಲ್ಲೂ ತೃತೀಯ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ದೈಹಿಕ ಶಿಕ್ಷಕರಾದ ಸುಧಾಕರ್, ಅಲ್ಫೋನ್ಸಾ ಹಾಗೂ ಮನೋಜ್ ಅವರು ವಿದ್ಯಾರ್ಥಿಗಳಿಗೆ ಕಠಿಣ ತರಬೇತಿ ನೀಡಿ ಯಶಸ್ಸಿನ ಹಾದಿ ತೋರಿಸಿದ್ದಾರೆ. ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸಂಸ್ಥೆಯ ಪ್ರಾಂಶುಪಾಲರಾದ ಫಾ.ಡಾ.ವರ್ಗೀಸ್ ಕೈಪಿನಡ್ಕ, ಕಾರ್ಯದರ್ಶಿ ಫಾ.ಸಾಮ್ಯುಯೆಲ್ ಜಾರ್ಜ್ ಹಾಗೂ ಸಹಕಾರ್ಯದರ್ಶಿ ಫಾ. ವರ್ಗೀಸ್ ಎಸ್. ಅವರು ಅಭಿನಂದನೆ ಸಲ್ಲಿಸಿದ್ದಾರೆ.






