ಸುಳ್ಯದ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಶೇರ್ ಮಾಡಿ

ಸುಳ್ಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.

ಸುಳ್ಯ ಜಟ್ಟಿಪಳ್ಳದ ಕಾನತ್ತಿಲ ಬಳಿಯ ಬಾಡಿಗೆ ಮನೆ ಯೊಂದರಲ್ಲಿದ್ದ ದುಗಲಡ್ಕ ಕೇಶವ ಪೂಜಾರಿ ಎಂಬವರ ಪುತ್ರ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ‌ ಪ್ರಥಮ ವರ್ಷದ ವಿದ್ಯಾರ್ಥಿ ವೀಕ್ಷಿತ್ (19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಇಂಜಿನಿಯರಿಂಗ್ ಕಾಲೇಜಿನಲ್ಲಿ ತರಗತಿ ಪರೀಕ್ಷೆ ದಾಖಲಾಗಿ ಪರೀಕ್ಷೆ ಬರೆದಿದ್ದ ವೀಕ್ಷಿತ್, ದಿನ ಸಂಜೆ ತನ್ನ ತಾಯಿಯನ್ನು ಅವರು ಕೆಲಸ ಮಾಡುವಲ್ಲಿಂದ ಮನೆಗೆ ಕರೆದುಕೊಂಡು ಬರುತ್ತಿದ್ದ. ಮಂಗಳವಾರ ತಾಯಿಯನ್ನು ಕರೆ ತರಲು ಬಾರದ ಕಾರಣ ಮತ್ತು ಕರೆ ಸ್ವೀಕರಿಸದ ಕಾರಣ ತಾಯಿ ಪದ್ಮಿನಿ ಅವರು ಹತ್ತಿರದ ಮನೆಯವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಹತ್ತಿರದ ಮನೆಯವರು ಬಂದು ನೋಡಿದಾಗ ರೂಮಿನಲ್ಲಿ ವೀಕ್ಷಿತ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಸುಳ್ಯ ಪೊಲೀಸರು ಆಗಮಿಸಿ ಮಹಜರು ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.

  •  

Leave a Reply

error: Content is protected !!