

ಸುಬ್ರಹ್ಮಣ್ಯ: ಮದುವೆಯ ಸಂಭ್ರಮವು ಕ್ಷಣಾರ್ಧದಲ್ಲಿ ಶೋಕವಾಗಿ ಬದಲಾದ ದುರ್ಘಟನೆ ಸಕಲೇಶಪುರ ತಾಲೂಕಿನ ಬಿಸಿಲೆ ಘಾಟ್‌ನಲ್ಲಿ ಅ.30ರ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ವನಗೂರಿನಿಂದ ಕುಕ್ಕೆ ಸುಬ್ರಹ್ಮಣ್ಯ ದಾರಿಗೆ ಹೊರಟಿದ್ದ ವ್ಯಾನ್ ವಾಹನವು ಬಿಸಿಲೆ ಘಾಟ್‌ನ ತೀವ್ರ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 20 ಅಡಿ ಎತ್ತರದಿಂದ ಕಣಿವೆಗೆ ಪಲ್ಟಿಯಾಗಿ ಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಶಿವರಾಜ್ (50) ಎಂಬವರು ಮೃತರಾಗಿದ್ದು, 6 ಮಂದಿ ತೀವ್ರ ಗಾಯಗೊಂಡಿದ್ದು, ಉಳಿದ ಸುಮಾರು 20 ಗಾಯಗೊಂಡಿದ್ದು, ಇದರಲ್ಲಿ 6 ಮಂದಿಗೆ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವೇಳೆ ವಾಹನದಲ್ಲಿ ಒಟ್ಟು 30 ಮಂದಿ ಪ್ರಯಾಣಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಮದುವೆಯ ಉತ್ಸಾಹದಲ್ಲಿದ್ದ ಕುಟುಂಬ ಹಾಗೂ ಬಂಧುಮಿತ್ರರು ಇದೀಗ ದುಃಖದ ವಾತಾವರಣದಲ್ಲಿ ಮುಳುಗಿದ್ದಾರೆ. ಮದುವೆ ನಡೆಯಬೇಕಿದ್ದ ಮನೆಗೆ ಈಗ ಶೋಕದ ನೆರಳು ಆವರಿಸಿದೆ.






