

ನೆಲ್ಯಾಡಿ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಏರಿಯಾ ಎಫ್ ಪ್ರಾಂತೀಯ ಸಮ್ಮೇಳನದಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜಿಯನ್ ದೇಶದ ಅತ್ಯುತ್ತಮ ಲೀಜಿಯನ್ ಗಳಲ್ಲಿ ಒಂದಾಗಿ “ಟಾಪ್ ಟೆನ್ ಲೀಜಿಯನ್” ಪ್ರಶಸ್ತಿಗೆ ಭಾಜನವಾಗಿದೆ.
2025-26ನೇ ಸಾಲಿನಲ್ಲಿ ನೆಲ್ಯಾಡಿ ಸೀನಿಯರ್ ಚೇಂಬರ್ ಕೈಗೊಂಡ ಸಮುದಾಯ ಅಭಿವೃದ್ಧಿ, ಸಾರ್ವಜನಿಕ ಸಂಪರ್ಕ, ಮತ್ತು ವಿವಿಧ ತರಬೇತಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನವನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ಸೀನಿಯರ್ ಎಂ.ಆರ್. ಜಯೇಶ್, ಪ್ರಧಾನ ಕಾರ್ಯದರ್ಶಿ ವಾಸುದೇವನ್, ಕಾರ್ಯಕ್ರಮದ ಅಧ್ಯಕ್ಷ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ಸೀನಿಯರ್ ಸಿದ್ದಗಂಗಯ್ಯ ಮತ್ತು ಪದಾಧಿಕಾರಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜಿಯನ್ ಸ್ಥಾಪಕಾಧ್ಯಕ್ಷ ಸೀನಿಯರ್ ಪಿಪಿಎಫ್ ಅಬ್ರಹಾಂ ವರ್ಗೀಸ್, ಅಧ್ಯಕ್ಷ ಸೀನಿಯರ್ ಪಿಪಿಎಫ್ ಪ್ರಕಾಶ್ ಕೆ.ವೈ, ಕಾರ್ಯದರ್ಶಿ ಸೀನಿಯರ್ ಪಿಪಿಎಫ್ ಉಲಹನ್ನಾನ್ ಪಿ.ಎಂ, ಕೋಶಾಧಿಕಾರಿ ಸೀನಿಯರ್ ಮೋಹನ್ ಕುಮಾರ್ ಡಿ, ರಾಷ್ಟ್ರೀಯ ಸಂಯೋಜಕ ಸೀನಿಯರ್ ಪಿಪಿಪಿಎಫ್ ಡಾ.ಸದಾನಂದ ಕುಂದರ್ ಹಾಗೂ ಸೀನಿಯರೆಟ್ ಎಲ್ಸಿ ಪಿ.ಪಿ ಮೊದಲಾದವರು ಉಪಸ್ಥಿತರಿದ್ದರು.






