

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿ ಆಶ್ರಯದಲ್ಲಿ ನ.1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕಿನ 12 ಮಂದಿ ಗಣ್ಯ ವ್ಯಕ್ತಿಗಳಿಗೂ ಒಂದು ಸಂಘಟನೆಗೂ ತಾಲೂಕು ಮಟ್ಟದ “ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025” ನೀಡಿ ಗೌರವಿಸಲಾಗುತ್ತಿದೆ.
ಈ ಆಯ್ಕೆ ಶಾಸಕ ಅಶೋಕ್ ಕುಮಾರ್ ರೈ ಕೆ.ಎಸ್. ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರು, ತಹಸೀಲ್ದಾರ್, ಬಿಇಓ, ತಾಪಂ ಇಓ ಹಾಗೂ ಕಸಾಪ ಅಧ್ಯಕ್ಷರು ಸದಸ್ಯರಾಗಿ ಇದ್ದ ಸಮಿತಿಯು ಪ್ರಶಸ್ತಿ ಪುರಸ್ಕೃತರನ್ನು ಅಂತಿಮಗೊಳಿಸಿದೆ.
ಸಾಹಿತ್ಯ ಕ್ಷೇತ್ರ ಡಾ. ನರೇಂದ್ರ ರೈ ದೇರ್ಲ, ವೈದ್ಯಕೀಯ ಕ್ಷೇತ್ರ ಡಾ. ಜೆ.ಸಿ. ಅಡಿಗ, ಶಿಕ್ಷಣ ಕ್ಷೇತ್ರ ಪ್ರೊ.ಝೇವಿಯರ್ ಡಿಸೋಜಾ(ನಿವೃತ್ತ ಪ್ರಾಂಶುಪಾಲ), ಸಾಹಿತ್ಯ ಕ್ಷೇತ್ರ ಡಾ. ರಾಜೇಶ್ ಬೆಜ್ಜಂಗಳ, ಪತ್ರಿಕೋದ್ಯಮ ಕ್ಷೇತ್ರ ಉದಯ ಕುಮಾರ್ ಯು.ಎಲ್, ಶಿಲ್ಪಕಲೆ ಎಂ.ವಾಸುದೇವ ಆಚಾರ್ಯ ಬೆದ್ರಾಳ ನೆಕ್ಕರೆ, ಸಮಾಜ ಸೇವೆ ಅಬೂಬಕ್ಕರ್ ಮುಲಾರ್, ಅಜ್ಜಿಕಟ್ಟೆ,ಶಿಕ್ಷಣ ಕ್ಷೇತ್ರ ರಮೇಶ್ ಉಳಯ, ಸಮಾಜ ಸೇವೆ ಸಂಶುದ್ದೀನ್ ಸಾಲ್ಮರ ಪಂಜಳ ನರಿಮೊಗ್ರು, ದೈವಾರಾಧನೆ ಬಾಲಕೃಷ್ಣ ಪೂಜಾರಿ ಪಲ್ಲತ್ತಾರ್ ಕುಡಿಪ್ಪಾಡಿ, ಯಕ್ಷಗಾನ ಕ್ಷೇತ್ರ ವಿನೋದ್ ರೈ ಸೊರಕೆ, ರಂಗಭೂಮಿ ಕ್ಷೇತ್ರ ಬಿ.ಪವಿತ್ರ ಹೆಗ್ಡೆ ಪಡ್ಡಾಯೂರು ಪಡ್ನೂರು, ಸಂಘ ಸಂಸ್ಥೆಗಳ ಪೈಕಿ ಜೆಸಿಐ ಆಯ್ಕೆಯಾಗಿದ್ದು ಅಧ್ಯಕ್ಷ ಭಾಗ್ಯೇಶ್ ರೈ ಪ್ರಶಸ್ತಿ ಸ್ವೀಕರಿಸಲಿದ್ದಾರೆ.






