ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯಲ್ಲಿ ರಕ್ತದಾನ ಶಿಬಿರ: 43 ದಾನಿಗಳಿಂದ ರಕ್ತದಾನ

ಶೇರ್ ಮಾಡಿ

ಆಲಂಕಾರು: ಶ್ರೀ ಭಾರತಿ ವಿದ್ಯಾಸಂಸ್ಥೆಗಳು ಆಲಂಕಾರು, ಗ್ರಾಮವಿಕಾಸ ಸಮಿತಿ ಆಲಂಕಾರು, ಸಪ್ತ ಶಕ್ತಿ ಸಂಗಮ ಆಲಂಕಾರು, ಲಯನ್ಸ್ ಕ್ಲಬ್ ದುರ್ಗಂಬಾ ಆಲಂಕಾರು,ಹಾಗೂ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಇವರ ಸಹಯೋಗದಲ್ಲಿ ಆಲಂಕಾರು ಭಾರತಿ ವಿದ್ಯಾಸಂಸ್ಥೆ ಯ ಮಾಧವ ಸಭಾಭವನದಲ್ಲಿ ರಕ್ತ ದಾನ ಶಿಬಿರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಈಶ್ವರ ಗೌಡ ಪಜ್ಜಡ್ಕ ವಹಿಸಿದ್ದರು. ಲಯನ್ಸ್ ಕ್ಲಬ್ ದುರ್ಗಂಬಾ ಆಲಂಕಾರು ಅಧ್ಯಕ್ಷ ಲ.ಪದ್ಮಪ್ಪ ಗೌಡ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ರೋಟರಿ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ರಾಧಾಕೃಷ್ಣ ರಾವ್ ಮಾತಾನಾಡಿ ರಕ್ತ ದಾನದ ಮಹತ್ವ ಮತ್ತು ಪ್ರಯೋಜನ ಸೇರಿದಂತೆ, ಹಲವು ಮಾಹಿತಿಗಳನ್ನು ಸಭೆಯಲ್ಲಿ ಹಂಚಿಕೊಂಡರು.

ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಲ.ಇಂದುಶೇಖರ ಶೆಟ್ಟಿ, ಲಯನ್ಸ್ ಕ್ಲಬ್ ದುರ್ಗಂಬಾ ಇದರ ಕಾರ್ಯದರ್ಶಿ ಲ.ಲಿಂಗಪ್ಪ ಪೂಜಾರಿ ನೈಯಲ್ಗ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ರಕ್ಷಿತಾ, ಅಮೃತಾ, ದ್ವಿತಿ, ದ್ಯುತಿ ಎಚ್.ಕೆ, ರಶ್ಮಿಕಾ ಪ್ರಾರ್ಥಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯೆ ಮಮತಾ ಅಂಬರ್ಜೆ ಪ್ರಸ್ತಾವಿಕದೊಂದಿಗೆ ಸ್ವಾಗತಿಸಿದರು. ಶಿಕ್ಷಕ ಚಂದ್ರಹಾಸ್ ಕೆ.ಸಿ ಕುಂಟ್ಯಾನ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಮಾತಾಜಿ ಆಶಾ ಎಸ್.ರೈ ವಂದಿಸಿದರು. ಸಂಸ್ಥೆಯ ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಸಹಕರಿಸಿದರು.

  •  

Leave a Reply

error: Content is protected !!