

ನೆಲ್ಯಾಡಿ: ದೀಪಾವಳಿಯ ಹಬ್ಬದ ಸಂಭ್ರಮದಲ್ಲಿ ನೆಲ್ಯಾಡಿ–ಕೊಕ್ಕಡದ ಶಿವಕಾಶಿ ಪಟಾಕಿ ಸ್ಟಾಲ್ ಸಂಸ್ಥೆ ತಮ್ಮ ಗ್ರಾಹಕರಿಗಾಗಿ ಆಯೋಜಿಸಿದ್ದ “ಗಿಫ್ಟ್ ಕೂಪನ್ ಲಕ್ಕಿ ಡ್ರಾ” ಕಾರ್ಯಕ್ರಮದಲ್ಲಿ ಅದೃಷ್ಟ ಗ್ರಾಹಕರ ಪಟ್ಟಿ ಪ್ರಕಟಗೊಂಡಿದೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಖರೀದಿಸಿದ ಗ್ರಾಹಕರಿಗೆ ಸಂಸ್ಥೆಯವರು ನೀಡಿದ ಕೂಪನ್ ಆಧಾರದ ಮೇಲೆ ಲಕ್ಕಿ ಡ್ರಾ ಆಯೋಜಿಸಲಾಯಿತು. ಗ್ರಾಹಕರಿಂದ ಭಾರಿ ಪ್ರತಿಕ್ರಿಯೆ ದೊರೆತ ಈ ಯೋಜನೆಯ ವಿಜೇತರ ಡ್ರಾ ಕಾರ್ಯಕ್ರಮವನ್ನು ನೆಲ್ಯಾಡಿ–ಕೌಕ್ರಾಡಿ ವರ್ತಕರ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್. ಅವರು ನೆರವೇರಿಸಿದರು.
ಲಕ್ಕಿ ಡ್ರಾ ವಿಜೇತರ ಪಟ್ಟಿ ಈ ಕೆಳಗಿನಂತಿದೆ:
1ನೇ ಬಹುಮಾನ: 32 ಇಂಚಿನ ಎಲ್‌ಇಡಿ ಟಿವಿ — ಪ್ರವೀಣ್ ಶಿಬಾಜೆ (ಕೂಪನ್ ಸಂಖ್ಯೆ: 1837)
2ನೇ ಬಹುಮಾನ: 35 ಲೀಟರ್ ಕೂಲರ್ — ಜಿ. ರವಿ ರೆಖ್ಯ (ಕೂಪನ್ ಸಂಖ್ಯೆ: 1102)
3ನೇ ಬಹುಮಾನ: ಹೋಮ್ ಥಿಯೇಟರ್ — ವೈಶು ಕಾಸರಗೋಡು (ಕೂಪನ್ ಸಂಖ್ಯೆ: 1722)
4ನೇ ಬಹುಮಾನ: ಟೇಬಲ್ ಫ್ಯಾನ್ — ಪಾರ್ಥ ಕಾವೂರ್ (ಕೂಪನ್ ಸಂಖ್ಯೆ: 1008)
5ನೇ ಬಹುಮಾನ: ಡಿನ್ನರ್ ಸೆಟ್ — ರಿತೇಶ್ ಉದನೆ (ಕೂಪನ್ ಸಂಖ್ಯೆ: 1324)
ಈ ಸಂದರ್ಭದಲ್ಲಿ ಶಿವಕಾಶಿ ಪಟಾಕಿ ಅಂಗಡಿ ಮಾಲಕರಾದ ಸೋನಿತ್, ಸುಧೀರ್, ಸಂತೋಷ್ ಹಾಗೂ ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದರು.






