ಕೊಕ್ಕಡ: ಅಗ್ನಿ ದುರಂತದಲ್ಲಿ ರೆಖ್ಯ ಬಾಲಕೃಷ್ಣರ ಮನೆ ಸುಟ್ಟು ಕರಕಲು – ಲಕ್ಷಾಂತರ ರೂ ನಷ್ಟ

ಶೇರ್ ಮಾಡಿ

ಕೊಕ್ಕಡ: ರೆಖ್ಯ ಸಮೀಪದ ಕೊಲಾರು ನಿವಾಸಿ ಬಾಲಕೃಷ್ಣ ರವರ ಮನೆ ನ.13ರಂದು ಮುಂಜಾನೆ ಭೀಕರ ಅಗ್ನಿ ದುರಂತಕ್ಕೊಳಗಾಗಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆ ಮಂದಿ ಕೆಲಸಕ್ಕೆ ತೆರಳಿದ್ದ ಕಾರಣದಿಂದ ಜೀವ ಹಾನಿ ತಪ್ಪಿದೆಯಾದರೂ, ಆಸ್ತಿ ನಷ್ಟ ಭಾರೀ ಪ್ರಮಾಣದಲ್ಲಿದೆ.

ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ₹45,000 ನಗದು, ಬಂಗಾರದ ಆಭರಣಗಳು, ಮಕ್ಕಳ ಪುಸ್ತಕಗಳು, ಬಟ್ಟೆಗಳು ಸೇರಿದಂತೆ ಮನೆಯ ಎಲ್ಲಾ ಸಾಮಾನುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಗ್ನಿ ತಗುಲಿದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನಾ ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷೆ ಗಾಯತ್ರಿ, ಸದಸ್ಯ ಜನಾರ್ಧನ್ ರೆಖ್ಯ ಹಾಗೂ ಪಂಚಾಯತ್ ಸಿಬ್ಬಂದಿಗಳು ಭೇಟಿ ನೀಡಿ, ಪರಿಸ್ಥಿತಿ ಪರಿಶೀಲಿಸಿದರು. ಅಗ್ನಿ ಪೀಡಿತ ಕುಟುಂಬಕ್ಕೆ ಅಗತ್ಯ ಸಹಾಯ ಮತ್ತು ಸರ್ಕಾರದಿಂದ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

  •  

Leave a Reply

error: Content is protected !!