

ನೆಲ್ಯಾಡಿ: ನೂಜಿಬಾಳ್ತಿಲ ಬೆಥನಿ ವಿದ್ಯಾ ಸಂಸ್ಥೆಯ ಮೂವರು ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತಮ್ಮ ಶಕ್ತಿಯನ್ನು ತೋರಿಸಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ನ.12 ಮತ್ತು 13ರಂದು ಸುಳ್ಯ ತಾಲೂಕು ಪಂಜದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 17ರ ವಯೋಮಾನದ ಪ್ರೌಢಶಾಲಾ ಬಾಲಕಿಯರ ವಿಭಾಗದ ಸ್ಪರ್ಧೆಯಲ್ಲಿ ಮೂವರು ವಿದ್ಯಾರ್ಥಿನಿಯರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
3 ಕಿಲೋಮೀಟರ್ ವೇಗದ ನಡಿಗೆಯಲ್ಲಿ ಪ್ರಜ್ಞಾ ಪ್ರಥಮ ಸ್ಥಾನ, 400 ಮೀಟರ್ ಅಡೆತಡೆ ಓಟದಲ್ಲಿ ಅಪೇಕ್ಷ ದ್ವಿತೀಯ ಸ್ಥಾನ, ಹಾಗೂ 3000 ಮೀಟರ್ ಓಟದಲ್ಲಿ ಮೋಕ್ಷ ದ್ವಿತೀಯ ಸ್ಥಾನ ಗಳಿಸಿ, ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಾಧನೆಯ ಹಿಂದೆ ತರಬೇತಿ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕರಾದ ಪುನೀತ್ ಮತ್ತು ಮತ್ತಾಯಿ ಅವರ ಶ್ರಮ ಇದೆ ಅವರಿಗೆ ಹಾಗೂ ವಿಜೇತ ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಾಂಶುಪಾಲ ಜಾರ್ಜ್ ಟಿ.ಎಸ್, ಮುಖ್ಯಶಿಕ್ಷಕ ತೋಮಸ್ ಎ.ಕೆ, ಉಪನ್ಯಾಸಕರು ಹಾಗೂ ಶಿಕ್ಷಕ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.






