10 ಶಾಲೆಗಳ 200 ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ


ನೆಲ್ಯಾಡಿ: ಗೋಳಿತಟ್ಟು ಸ ಉ ಹಿ ಪ್ರಾ ಶಾಲೆಯ ಆವರಣದಲ್ಲಿ ನ.13ರಂದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.
ನಿವೃತ್ತ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ ಎಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಲೆ ಎಂದರೆ ಕೇವಲ ಪಾಠ ಕಲಿಸುವ ಸ್ಥಳವಲ್ಲ, ಇದು ವಿದ್ಯಾರ್ಥಿಗಳ ಸ್ವಭಾವ, ಕೌಶಲ್ಯ ಹಾಗೂ ವ್ಯಕ್ತಿತ್ವವನ್ನು ರೂಪಿಸುವ ಕಾರ್ಯಾಗಾರ. ಪ್ರತಿಭಾ ಕಾರಂಜಿ ಮಕ್ಕಳಿಗೆ ತಮ್ಮ ಸಾಮರ್ಥ್ಯವನ್ನು ಸಮಾಜದ ಮುಂದೆ ತೋರುವ ಅತ್ಯುತ್ತಮ ಅವಕಾಶ. ಗೆಲುವು–ಸೋಲು ಎರಡೂ ಸಹಜ, ಆದರೆ ವೇದಿಕೆಯಲ್ಲಿ ಧೈರ್ಯದಿಂದ ನಿಲ್ಲುವುದು, ಭಾಗವಹಿಸುವುದು ಇವುಗಳೇ ನಿಜವಾದ ಶಿಕ್ಷಣ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲಿ ಎನ್ನುವುದು ನನ್ನ ಆಶಯ ಎಂದು ಹೇಳಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗೋಪಾಲ ಗೌಡ ಕುದ್ಕೋಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರತಿಭಾ ಕಾರಂಜಿಯಂತಹ ವೇದಿಕೆಗಳು ಮಕ್ಕಳ ಮನಸ್ಸಿನಲ್ಲಿರುವ ಸೃಜನಶೀಲತೆಯನ್ನು ಹೊರತೆಗೆಯುತ್ತದೆ. ಇಂದಿನ ವಿದ್ಯಾರ್ಥಿಗಳ ಆತ್ಮವಿಶ್ವಾಸ, ವೇದಿಕೆ ನಿಭಾಯಿಸುವ ಶಕ್ತಿ, ಪರಸ್ಪರ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಎಲ್ಲ ಮಕ್ಕಳೂ ತಮ್ಮದೇ ರೀತಿಯಲ್ಲಿ ವಿಜೇತರಾಗಿದ್ದಾರೆ. ಶಿಕ್ಷಕರ ಶ್ರಮ ಮತ್ತು ಪಾಲಕರ ಸಹಕಾರವೇ ಈ ಕಾರ್ಯಕ್ರಮ ಯಶಸ್ವಿಯಾಗುವ ಮುಖ್ಯ ಕಾರಣ ಎಂದು ಅವರು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ವೆಂಕಪ್ಪ ಗೌಡ ಡೆಬ್ಬೇಲಿ, ಎಸ್ಡಿಎಂಸಿ ಸದಸ್ಯ ಚಿದಾನಂದ ಗೌಡ, ಬಜತ್ತೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ ಕೆ.ವಿ. ಹಾಗೂ ಶಾಲಾ ಮುಖ್ಯಶಿಕ್ಷಕಿ ಜಯಂತಿ ಬಿ.ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಜತ್ತೂರು ಕ್ಲಸ್ಟರ್ನ ಶಿಕ್ಷಕರು ಕಾರ್ಯಕ್ರಮದ ಕೊಠಡಿ ಮೇಲ್ವಿಚಾರಣೆ ನಡೆಸಿದರೆ, ನೆರೆಯ ಕ್ಲಸ್ಟರ್ ಶಿಕ್ಷಕರು ತೀರ್ಪುಗಾರರಾಗಿ ಸಹಕರಿಸಿದರು. ಕ್ಲಸ್ಟರ್ನ 10 ಶಾಲೆಗಳ 200 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ವಿಜೇತರಾದರು.
ಕಿರಿಯರ ವಿಭಾಗದಲ್ಲಿ:
ಬಜತ್ತೂರು ಸ ಹಿ ಪ್ರಾ ಶಾಲೆ ಪ್ರಥಮ ಚಾಂಪಿಯನ್. ಹೊಸಗದ್ದೆ ಸ ಹಿ ಪ್ರಾ ಶಾಲೆ ದ್ವಿತೀಯ ಸ್ಥಾನ ಗಳಿಸಿದರು.
ಹಿರಿಯರ ವಿಭಾಗದಲ್ಲಿ:
ಶಾಂತಿನಗರ ಸ ಹಿ ಪ್ರಾ ಶಾಲೆ ಪ್ರಥಮ ಚಾಂಪಿಯನ್. ಕಾಂಚನ ಶ್ರೀ ಲಕ್ಷ್ಮೀನಾರಾಯಣ ಆಂಗ್ಲ ಮಾಧ್ಯಮ ಹಿ ಪ್ರಾ ಶಾಲೆ ದ್ವಿತೀಯ ಸ್ಥಾನ ಗಳಿಸಿದರು.






