

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಸೌತಡ್ಕದ ದೇವಸ್ಥಾನದಲ್ಲಿ ದಿನಗೂಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ಸುಜಾತಾ ಅವರ ಪತಿ ಬಾಲಕೃಷ್ಣ ಶೆಟ್ಟಿ ಇತ್ತೀಚೆಗೆ ಕಾಡಾನೆ ದಾಳಿಯಲ್ಲಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಸ್ಥಳೀಯರಲ್ಲಿ ವಿಷಾದ ಮೂಡಿಸಿತ್ತು. ಘಟನೆ ನಂತರ ರಕ್ಷಿತ್ ಶಿವರಾಂ ಅವರು ಮನೆಬೇಟಿ ನೀಡಿದ ಸಂದರ್ಭದಲ್ಲಿ, ಮನೆಯವರು ಮತ್ತು ಗ್ರಾಮಸ್ಥರು ಮೃತರ ಪುತ್ರಿ ವೇದಿತ ಅವರಿಗೆ ಉದ್ಯೋಗದ ಅವಕಾಶ ಕಲ್ಪಿಸಿ, ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದರು.
ಮನವಿಗೆ ಸ್ಪಂದಿಸಿದ ರಕ್ಷಿತ್ ಶಿವರಾಂ ಅವರು ಪರಿಶ್ರಮದಿಂದ ಬೆಂಗಳೂರಿನ ಪ್ರಸಿದ್ಧ ಐಟಿ ಸಂಸ್ಥೆಯೊಂದರಲ್ಲಿ ವೇದಿತ ಅವರಿಗೆ ಉದ್ಯೋಗ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ನ.17ರಂದು ಆಕೆಯು ಅಧಿಕೃತವಾಗಿ ಐಟಿ ಉದ್ಯೋಗಿಯಾಗಿ ಹುದ್ದೆ ಸೇರುವಂತೆ ಸಂಸ್ಥೆಯ ಆದೇಶ ಹೊರಬಿದ್ದಿದೆ.
ಇದೇ ವೇಳೆ, ಕಾಡಾನೆ ದಾಳಿ ಸಂದರ್ಭದಲ್ಲಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಅರಣ್ಯ ಇಲಾಖೆಯಿಂದ ₹20 ಲಕ್ಷ ಪರಿಹಾರ ಮಂಜೂರಾತಿ ಮಾಡುವಲ್ಲಿ ಸಹ ರಕ್ಷಿತ್ ಶಿವರಾಂ ಅವರ ಈ ಮಾನವೀಯ ಸಹಾಯಕ್ಕಾಗಿ ಶ್ರೀ ಕ್ಷೇತ್ರ ಸೌತಡ್ಕದ ವ್ಯವಸ್ಥಾಪನ ಸಮಿತಿಯು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.






