ಜ್ಞಾನಪಥ ಪ್ರಬಂಧ ಸ್ಪರ್ಧೆಯಲ್ಲಿ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ವರ್ಷಾ.ಎ ರಾಜ್ಯಮಟ್ಟಕ್ಕೆ

ಶೇರ್ ಮಾಡಿ

ನೆಲ್ಯಾಡಿ: ಪುತ್ತೂರು ತಾಲೂಕು ಮಟ್ಟದಲ್ಲಿ ನಡೆದ ಜ್ಞಾನಪಥ ಪುಸ್ತಕ ಆಧಾರಿತ ಪ್ರಬಂಧ ಸ್ಪರ್ಧೆಯಲ್ಲಿ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ 10ನೇ ತರಗತಿ ವಿದ್ಯಾರ್ಥಿನಿ ವರ್ಷಾ.ಎ ಅವರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ — ಶಾಂತಿವನ ಟ್ರಸ್ಟ್ (ರಿ) ವತಿಯಿಂದ ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಮುರಂಕಲ್ಲು ಬಂಡಿಹೊಳೆ ನಿವಾಸಿ ಅರವಿಂದ ತುಳುಪುಳೆ ಮತ್ತು ವಿನಯ ತುಳುಪುಳೆ ದಂಪತಿಗಳ ಪುತ್ರಿಯಾಗಿರುವ ವರ್ಷಾ ಎ, ತಮ್ಮ ಉತ್ತಮ ಬರವಣಿಗೆಯಿಂದ ಸ್ಪರ್ಧೆಯಲ್ಲಿ ಗಮನ ಸೆಳೆದಿದ್ದರು.

ವಿದ್ಯಾರ್ಥಿನಿಗೆ ಶಿಕ್ಷಕರಾದ ಕರುಣಾಕರ ರವರು ವಿಶೇಷ ಮಾರ್ಗದರ್ಶನ ನೀಡಿದ್ದು. ವರ್ಷಾ ಅವರ ಈ ಯಶಸ್ಸಿಗೆ ಸಂಸ್ಥೆಯ ಕಾರ್ಯದರ್ಶಿ ಫಾ.ಅನೀಶ್ ಪಾರಶೆರಿಲ್, ಸಂಚಾಲಕ ಫಾ.ನೋಮಿಸ್ ಕುರಿಯಕೋಸ್, ಪ್ರಾಂಶುಪಾಲ ಎಂ.ಕೆ. ಏಲಿಯಾಸ್, ಮುಖ್ಯಶಿಕ್ಷಕ ತೋಮಸ್ ಎಂ.ಐ ಮತ್ತು ಹರಿಪ್ರಸಾದ್ ಕೆ, ಶಿಕ್ಷಕ–ಶಿಕ್ಷಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

  •  

Leave a Reply

error: Content is protected !!