ಸಂಸ್ಕೃತಿ–ಪರಂಪರೆ–ಕೃಷಿ: ತುಳುನಾಡಿನ ವೈಶಿಷ್ಟ್ಯ ಮೆರಗು — ನಳಿನ್ ಕುಮಾರ್ ಕಟೀಲ್


ನೆಲ್ಯಾಡಿ: ಅಶ್ವತ್ಥ ಗೆಳೆಯರ ಬಳಗ ಹೊಸಮಜಲು–ಕೌಕ್ರಾಡಿ ಇವರ ಆಶ್ರಯದಲ್ಲಿ ಸ್ಥಳೀಯ ಹಿಂದೂ ಬಾಂಧವರಿಗಾಗಿ ಆಯೋಜಿಸಲಾದ ದ್ವಿತೀಯ ವರ್ಷದ “ಕಂಡಡ್ ಒಂಜಿದಿನ” ಭವ್ಯ ಕ್ರೀಡಾಕೂಟವು ನ.16ರಂದು ಬಾಣಜಾಲು ಗದ್ದೆಯಲ್ಲಿ ಅದ್ಧೂರಿಯಾಗಿ ಜರುಗಿತು. ಅಶ್ವತಕಟ್ಟೆಯ ಬಳಿ ಸುಬ್ರಹ್ಮಣ್ಯ ವಿಲಾಸದ ಮಾಲಕ ಸುಬ್ರಹ್ಮಣ್ಯ ಆಚಾರ್ಯ ದೀಪ ಬೆಳಗಿಸಿ ಮೆರವಣಿಗೆಯನ್ನು ಅದ್ಧೂರಿಯಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ದೇವಸ್ಥಾನದ ದೇವಸ್ಥಾನದ ಪ್ರದಾನ ಅರ್ಚಕ ಶ್ರೀಧರ ನೂಜಿನ್ನಾಯ ಉಪಸ್ಥಿತರಿದ್ದರು.

ಜೋಡೆತ್ತಿನ ಮತ್ತು ಟಾಸೆ ನಾದದ ಸೊಬಗಿನಲ್ಲಿ ಅಶ್ವತ್ಥಕಟ್ಟೆಯಿಂದ ಬಾಣಜಾಲು ಗದ್ದೆಯವರೆಗೆ ಮೆರವಣಿಗೆ ಸಾಗಿಸಾಗಿ ಬಂದಿತು.
ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಮಾಜಿ ಸಂಸದರು, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷರು, ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮಾತನಾಡಿದ ಅವರು ತುಳುನಾಡು ನಮ್ಮ ದೇಶದ ಅತ್ಯಂತ ಸಂಪ್ರದಾಯಪರ ಭಾಗ. ಕೃಷಿ ನಮ್ಮ ಹಿರಿಯರ ನಾಡಿನ ಜೀವನಾಡಿ. ಜಗತ್ತಿನಲ್ಲೇ ಇಲ್ಲದಂತಹ ನಾಗಾರಾಧನೆ, ದೈವಾರಾಧನೆ, ದೇವತಾರಾಧನೆ ಇಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದಿದೆ. ಇಂದಿನ ದಿನಗಳಲ್ಲಿ ಆ ಪರಂಪರೆಗಳು ದೂರವಾಗುತ್ತಿದ್ದರೂ, ‘ಕಂಡಡ್ ಒಂಜಿದಿನ’ ಆಚರಣೆಯ ಮೂಲಕ ಅಶ್ವತ್ಥ ಗೆಳೆಯರ ಬಳಗ ಯುವಕರು ನಂಬಿಕೆ-ಪರಂಪರೆಯನ್ನು ಉಳಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಪ್ರಶಂಸಿಸಿದರು.

ಕ್ರೀಡಾಕೂಟವನ್ನು ಗದ್ದೆಗೆ ಗದ್ದೆಗೆ ಹಾಲೆರೆಯುವ ಮೂಲ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಉದ್ಘಾಟಿಸಿ ಮಾತನಾಡಿದ ಅವರು ನಾರಿ ಈ ದೇಶದ ಶಕ್ತಿ. ಜಗತ್ತಿನ ದೇವರ ಕೋಣೆ ಭಾರತ, ಭಾರತದ ದೇವರ ಕೋಣೆ ನಮ್ಮ ತುಳುನಾಡು. ದೈವ-ದೇವರ ಆರಾಧನೆಯ ಈ ನೆಲ ಸಂಸ್ಕೃತಿ-ಸಂಪ್ರದಾಯಗಳಲ್ಲಿ ಶ್ರೇಷ್ಠವಾಗಿದೆ. ಆ ಪರಂಪರೆಯನ್ನು ಯುವಕರು ಮುಂದುವರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಮುಖ್ಯ ಅತಿಥಿಗಳಾಗಿ ಕ್ಷೇ.ಧ.ಗ್ರಾ ಯೋಜನೆ ವಲಯ ಮೇಲ್ವಿಚಾರಕ ಆನಂದ, ಅಶ್ವತ್ಥ ಗೆಳೆಯರ ಬಳಗದ ಗೌರವಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಮುಳಿಯ ಗೋಲ್ಡ್ & ಡೈಮಂಡ್ಸ್ ಮ್ಯಾನೇಜರ್ ರಾಘವೇಂದ್ರ ಪಾಟೀಲ್, ಮಾಜಿ ಜಿ.ಪಂ ಸದಸ್ಯ ಸರ್ವೋತ್ತಮ ಗೌಡ, ನೆಲ್ಯಾಡಿ ಕಾಮಧೇನು ಮಹಿಳಾ ಸಂಘದ ಅಧ್ಯಕ್ಷೆ ಉಷಾ ಅಂಚನ್, ಕೌಕ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲೋಕೇಶ್ ಬಾಣಜಾಲು, ಉದ್ಯಮಿ ಶಿವಣ್ಣ ಪಿ. ಹೆಗ್ಡೆ, ಮುಖ್ಯಶಿಕ್ಷಕಿ ಜಯಂತಿ ಬಿ.ಎಂ., ನೆಲ್ಯಾಡಿ – ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ರವಿಚಂದ್ರ ಹೊಸವಕ್ಲು, ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿಯ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ, ಜಿಲ್ಲಾ ಬಿಜೆಪಿ ಪ್ರಕೋಷ್ಟದ ಕಾರ್ಯದರ್ಶಿ ಪ್ರಮೋದ್, ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿಗೌರವಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಅಧ್ಯಕ್ಷ ರೋಶನ್ ಬಿ.ಜೆ., ಉಪಾಧ್ಯಕ್ಷ ಸಂತೋಷ್ ಕಲಾಯಿ, ಕಾರ್ಯದರ್ಶಿ ಶೈಲೇಶ್ ಹೆಗ್ಡೆ, ಕೋಶಾಧಿಕಾರಿ ಪ್ರಜ್ವಲ್ ಬಿ., ಜೊತೆ ಕಾರ್ಯದರ್ಶಿ ರಂಜಿತ್ ಮಂಚಿ, ಸಂಚಾಲಕ ಸೋನಿತ್, ಸಹಸಂಚಾಲಕ ನವೀನ್ ಬಟ್ಟೆಸಾಗು ಉಪಸ್ಥಿತರಿದ್ದರು.
ಗೌರವಾರ್ಪಣೆ:
ಮೆಸ್ಕಾಂ ಪವರ್‌ಮೆನ್ ವಿಠಲ, ಹಿರಿಯ ಕೃಷಿಕ ಮಾಧವ ಗೌಡ ಗುತ್ತಿನಮನೆ, ಹಿರಿಯ ಕೃಷಿಕ ಪೊಡಿಯ ಅಜ್ಜ ಹಾಗೂ ಕೊರಗೆದಿ ಕಂಚರಮಕ್ಕಿ ಪಾಡ್ದನ ಗಾಯಕಿಯನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಧರ್ಮಶ್ರೀ ಭಜನಾ ಮಂಡಳಿಯ ಭಜನೆಯಿಂದ ಗದ್ದೆ ಮಂಗಲಧ್ವನಿಯಲ್ಲಿತ್ತು. ಅಂಗನವಾಡಿ ಮಕ್ಕಳಿಂದ 50 ವರ್ಷ ಮೇಲ್ಪಟ್ಟ ಹಿರಿಯರ ತನಕ ಎಲ್ಲರಿಗಾಗಿ ವೈವಿಧ್ಯಮಯ ಮನರಂಜನಾ ಆಟೋಟ ಸ್ಪರ್ಧೆಗಳು ದಿನವಿಡೀ ಭವ್ಯವಾಗಿ ಜರುಗಿದವು.
ಧರ್ಮಶ್ರೀ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ಹಾಗೂ ಅಂಗನವಾಡಿ ಮಕ್ಕಳಿಂದ 50 ವರ್ಷ ಮೇಲ್ಪಟ್ಟ ಹಿರಿಯರ ತನಕ ಎಲ್ಲರಿಗಾಗಿ ವೈವಿಧ್ಯಮಯ ಮನರಂಜನಾ ಆಟೋಟ ಸ್ಪರ್ಧೆಗಳು ಬೆಳಗಿನಿಂದ ಸಂಜೆವರೆಗೆ ನಡೆಯಿತು.
ಸಮಾರೋಪ:
ಸಮಾರೋಪ ಸಭೆಯ ಅಧ್ಯಕ್ಷತೆಯನ್ನು ಅಶ್ವತ್ಥ ಗೆಳೆಯರ ಬಳಗ ಅಧ್ಯಕ್ಷ ರೋಶನ್ ಬಿ.ಜೆ. ವಹಿಸಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ನೆಲ್ಯಾಡಿ ಆಶ್ವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಮುರಳೀಧರ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಕಾರ್ಯನಿರ್ವಣಾಧಿಕಾರಿ ದಯಾಕರ ರೈ, ಉದ್ಯಮಿ ಸುರೇಶ್ ಕುಂಡಡ್ಕ, ರಾಜ್ಯ ಬಿಜೆಪಿ ಶಿಕ್ಷಣ ಪ್ರಕೋಷ್ಟದ ಮುರಳಿ ಹೊಸಮಜಲು, ಕೌಕ್ರಾಡಿ ಗ್ರಾ.ಪಂ. ಸದಸ್ಯರಾದ ಸುಧಾಕರ ಗುತ್ತಿನಮನೆ, ಸವಿತಾ, ಪುಷ್ಪಾ, ದತ್ತ ಕೃಪಾ ಸ್ಟೋರ್ ಮಾಲಕ ಪದ್ಮನಾಭ ಶೆಟ್ಟಿ, ಸಿವಿಲ್ ಇಂಜಿನಿಯರ್ ಚಂದ್ರಹಾಸ ಪನ್ಯಾಡಿ, ಹೊಸಮಜಲು – ಕೌಕ್ರಾಡಿ ಅಶ್ವತ್ಥ ಗೆಳೆಯರ ಬಳಗದ ಗೌರವಾಧ್ಯಕ್ಷ ಬಾಲಕೃಷ್ಣ ಬಾಣಜಾಲು ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಕೌಕ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲೋಕೇಶ್ ಬಾಣಜಾಲು ವಂದಿಸಿದರು. ನೂಜಿಬಾಳ್ತಿಲ ಸಮೂಹ ಸಂಪನ್ಮೂಲ ವ್ಯಕ್ತಿ ಗಣೇಶ್ ನೆಡುವಾಳ್ ಆಟೋಟ ಸ್ಪರ್ಧೆಗಳ ನಿರೂಪಕರಾಗಿ, ದೈಹಿಕಶಿಕ್ಷಕ ಕುಶಾಲಪ್ಪ ಕ್ರೀಡಾಕೂಟದ ತೀರ್ಪುಗಾರರಾಗಿ, ವಂದನ್ ಕಾರ್ಯಕ್ರಮ ನಿರೂಪಿಸಿದರು. ಹೊಸಮಜಲು – ಕೌಕ್ರಾಡಿ ಅಶ್ವತ್ಥ ಗೆಳೆಯರ ಬಳಗದ ಸದಸ್ಯರು ಕಾರ್ಯಕ್ರಮ ಯಶಸ್ವಿಗೊಳಿಸಿದರು.






