

ನೆಲ್ಯಾಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ (ರಿ) ಇವರ ಆಶ್ರಯದಲ್ಲಿ ಪುಂಜಾಲಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಜ್ಞಾನ ಪಥ ಪುಸ್ತಕ ಆಧಾರಿತ ಪ್ರಬಂಧ ಸ್ಪರ್ಧೆ ಜರುಗಿತು.
ಈ ಸ್ಪರ್ಧೆಯಲ್ಲಿ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿನಿ ವರ್ಷಾ ಎ ರವರು ಅತ್ಯುತ್ತಮ ಪ್ರಬಂಧ ಮಂಡಿಸಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ. ವರ್ಷಾ ಅವರು ಮುರಂಕಲ್ಲು ಬಂಡಿಹೊಳೆ ನಿವಾಸಿ ಅರವಿಂದ ತುಳುಪುಳೆ ಮತ್ತು ವಿನಯ ತುಳುಪುಳೆ ದಂಪತಿಗಳ ಪುತ್ರಿಯಾಗಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಶಿಕ್ಷಕ ಕರುಣಾಕರ ರವರು ಸತತ ಮಾರ್ಗದರ್ಶನ ನೀಡಿದ್ದು, ಸ್ಪರ್ಧೆಯಲ್ಲಿ ಮಿಂಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವರ್ಷಾ ಅವರ ಈ ಯಶಸ್ಸಿಗೆ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಫಾ.ಅನೀಶ್ ಪಾರಶೆರಿಲ್, ಸಂಚಾಲಕ ಫಾ.ನೋಮಿಸ್ ಕುರಿಯಕೋಸ್, ಪ್ರಾಂಶುಪಾಲ ಎಂ.ಕೆ.ಏಲಿಯಾಸ್, ಮುಖ್ಯಶಿಕ್ಷಕ ತೋಮಸ್ ಎಂ.ಐ ಹಾಗೂ ಹರಿಪ್ರಸಾದ್ ಕೆ, ಜೊತೆಗೆ ಶಿಕ್ಷಕ–ಶಿಕ್ಷಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.






