ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆ ಪ್ರತಿಭಾ ಕಾರಂಜಿಯಲ್ಲಿ ಚಾಂಪಿಯನ್

ಶೇರ್ ಮಾಡಿ

ನೆಲ್ಯಾಡಿ: ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.19ರಂದು ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆ ಕಿರಿಯ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಮತ್ತು ಹಿರಿಯ ವಿಭಾಗದದಲ್ಲಿ ವಿದ್ಯಾರ್ಥಿಗಳು ತಮ್ಮ ಅದ್ಭುತ ಪ್ರತಿಭೆ ಮತ್ತು ಕೌಶಲ್ಯವನ್ನು ತೋರಿಸಿ ಹಲವು ಸ್ಪರ್ಧೆಗಳಲ್ಲಿ ಪ್ರಶಸ್ತಿಗಳು ಗಳಿಸಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಜೋಹಾನಾ ಮಡ್ಥಾ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯ ಪ್ರಥಮ, ಆಕ್ಷನ್ ಸಾಂಗ್ ನಲ್ಲಿ ದ್ವಿತೀಯ, ಆರಾಧ್ಯ ದಿಲೀಪ್ ಚಿತ್ರಕಲೆಯಲ್ಲಿ ಪ್ರಥಮ, ಧವನ್ ಇಂಗ್ಲಿಷ್ ಪಠಣದಲ್ಲಿ ಪ್ರಥಮ, ಕೇಥನ್ ಮಣ್ಣಿನ ಮಾದರಿ ಮಾಡುವುದರಲ್ಲಿ ದ್ವಿತೀಯ, ಲುಬೈಬ್ ಅರಬಿಕ್ ಪವಿತ್ರ ಗ್ರಂಥ ಪಾಠದಲ್ಲಿ ದ್ವಿತೀಯ, ಹಂಸಿಕಾ ಕನ್ನಡ ಪಠಣದಲ್ಲಿ ದ್ವಿತೀಯ, ಕೃತಿ ಬಿ ಭಾಷಣದಲ್ಲಿ ತೃತೀಯ.

ಹಿರಿಯ ಪ್ರಾಥಮಿಕ ವಿಭಾಗದಲ್ಲಿ ದಿಯಾ ಶ್ರೀ ಆಕ್ಷನ್ ಸಾಂಗ್ ನಲ್ಲಿ ಪ್ರಥಮ, ಕಥಾ ವಾಚನದಲ್ಲಿ ದ್ವಿತೀಯ, ಶ್ರೀಜಾ ಗೌಡ ಹಿಂದಿ ಪಠಣದಲ್ಲಿ ಪ್ರಥಮ, ಫಿದಾ ಫಾತಿಮಾ ಅರಬಿಕ್ ಪವಿತ್ರ ಗ್ರಂಥ ಪಾಠದಲ್ಲಿ ದ್ವಿತೀಯ, ಸಾಯಿಧಾತ್ರಿ ಭಕ್ತಿಗೀತೆಯಲ್ಲಿ ತೃತೀಯ, ಶ್ರಾವ್ಯ ಇಂಗ್ಲಿಷ್ ಪಠಣದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಯಶಸ್ಸಿಗೆ ಸಂಸ್ಥೆಯ ಸಂಚಾಲಕ ಹಾಗೂ ಪ್ರಿನ್ಸಿಪಾಲ್ ಫಾ. ಡಾ.ವರ್ಗೀಸ್ ಕೈಪಿನಡ್ಕ, ಕಾರ್ಯದರ್ಶಿ ಫಾ.ಸಾಮ್ಯುಯಲ್ ಜಾರ್ಜ್, ಜೊತೆ ಕಾರ್ಯದರ್ಶಿ ಫಾ.ವರ್ಗೀಸ್ ಎಸ್, ಸಂಸ್ಥೆಯ ಉಪಪ್ರಿನ್ಸಿಪಾಲ್ ಜೋಸ್ ಎಂ.ಜೆ., ಹೈಸ್ಕೂಲ್ ವಿಭಾಗದ ಮುಖ್ಯಶಿಕ್ಷಕ ಜಾರ್ಜ್ ಕೆ. ತೋಮಸ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಜೋಸ್ ಪ್ರಕಾಶ್, ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದರು.

  •  

Leave a Reply

error: Content is protected !!