ಯು.ಪಿ ವರ್ಗೀಸ್ ಸ್ಮರಣಾರ್ಥ ನೆಲ್ಯಾಡಿ ಎಲೈಟ್ ಬ್ಯಾಡ್ಮಿಂಟನ್ ಟ್ರೋಫಿ – 2025

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಯು.ಪಿ ವರ್ಗೀಸ್ ಅವರ ಸ್ಮರಣಾರ್ಥವಾಗಿ ನೆಲ್ಯಾಡಿ ಎಲೈಟ್ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಪುರುಷರ, ಮಹಿಳೆಯರ ಹಾಗೂ ಇಂಟರ್ ಮೀಡಿಯಟ್ ವಿಭಾಗಗಳ ಎಲೈಟ್ ಬ್ಯಾಡ್ಮಿಂಟನ್ ಟ್ರೋಫಿ–2025 ಪಂದ್ಯಕೂಟ ಶನಿವಾರ ಅದ್ದೂರಿಯಾಗಿ ನೆರವೇರಿತು.

ಪಂದ್ಯಕೂಟದ ಉದ್ಘಾಟನೆಯನ್ನು ನೆಲ್ಯಾಡಿ ಸೇಂಟ್ ಜೋಸೆಫ್ ಚರ್ಚ್‌ನ ಧರ್ಮಗುರು ಫಾ. ಜೋನ್ ಕುಂನತೇತ್ ನೆರವೇರಿಸಿ ಮಾತನಾಡಿದ ಅವರು ನೆಲ್ಯಾಡಿ ಪ್ರದೇಶದಲ್ಲಿ ಕ್ರೀಡಾ ಚಟುವಟಿಕೆಗಳು ಯುವಕರಲ್ಲಿ ದೈಹಿಕ ಆರೋಗ್ಯವನ್ನು ಹೆಚ್ಚಿಸುವ ಮಹತ್ವದ ವೇದಿಕೆ. ಈ ಕ್ರೀಡಾಕೂಟವು ಯು.ಪಿ ವರ್ಗೀಸ್ ಅವರ ಸೇವಾ ಮನೋಭಾವದ ಸ್ಮರಣೆಗೂ, ಯುವ ಕ್ರೀಡಾಪಟುಗಳ ಪ್ರೋತ್ಸಾಹಕ್ಕೂ ಪ್ರಮುಖ ವೇದಿಕೆ ಆಗಿದೆ ಎಂದು ಪ್ರಶಂಸಿಸಿದರು.

ನೆಲ್ಯಾಡಿ ಸೇಂಟ್ ಅಲ್ಫೋನ್ಸ ಚರ್ಚ್‌ನ ಧರ್ಮಗುರು ಫಾ.ಶಾಜಿ ಮಾತನಾಡಿ, ಕ್ರಿಕೆಟ್, ಫುಟ್ಬಾಲ್ ಜೊತೆಗೆ ಬ್ಯಾಡ್ಮಿಂಟನ್‌ಗೂ ಯುವಜನ ಮೆಚ್ಚಿರುವುದು ಸಂತೋಷಕರ. ಸ್ಪರ್ಧೆ ಗೆಲುವಿಗಾಗಿ ಮಾತ್ರವಲ್ಲ, ಆರೋಗ್ಯ ಮತ್ತು ಒಗ್ಗಟ್ಟಿಗಾಗಿ ಸಹ ಮುಖ್ಯ ಎಂದು ಹೇಳಿದರು.

ನೆಲ್ಯಾಡಿ ಸೇಂಟ್ ಚಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಾಹಂ ವರ್ಗೀಸ್ ಮಾತನಾಡಿ, ಯು.ಪಿ ವರ್ಗೀಸ್ ಅವರು ಸಮಾಜಸೇವೆಯ ಸಂಕೇತ. ಅವರ ಹೆಸರಿನಲ್ಲಿ ನಡೆಯುವ ಈ ಕ್ರೀಡಾಕೂಟ ಯುವ ಪ್ರತಿಭೆಗಳಿಗೆ ದೊಡ್ಡ ಪ್ರೇರಣೆ. ಕ್ರೀಡಾ ಸಂಸ್ಕೃತಿಯನ್ನು ಬೆಳೆಸಲು ಸಮಾಜ ಮತ್ತು ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ರಬ್ಬರ್ ಅಸೋಸಿಯೇಷನ್ ಅಧ್ಯಕ್ಷ ಶಾಜಿ ಯು.ವಿ, ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲಾಂ ಬಿಲಾಲ್, ಇಂಡಿಯನ್ ಆರ್ಮಿ ಸೆಕೆಂಡ್ ಕಮಾಂಡೆಡ್ ಎನ್.ಎ ಮ್ಯಾತ್ಯು, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಪ್ಯಾರಾ ಮಿಲಿಟರಿ ನಿವೃತ್ತ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಅಲ್ಫೋನ್ಸ, ನೆಲ್ಯಾಡಿ ಎಸ್‌ಟಿಜಿ ನರ್ಸಿಂಗ್ ಕಾಲೇಜ್ ಮೆನೇಜಿಂಗ್ ಡೈರೆಕ್ಟರ್ ಪ್ರಶಾಂತ ಚಾಕೋ, ಸಿಸ್ಟರ್ ಶೋಭನಾ, ಕೌಕ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕೆ ಇಬ್ರಾಹಿಂ, ಎಲೈಟ್ ಗ್ರೂಪ್‌ನ ಅನ್ನಮ್ಮ ವರ್ಗೀಸ್, ನೆಲ್ಯಾಡಿ ಆರೋಗ್ಯ ಕೇಂದ್ರದ ಸೆಲಿನಾ ಯು.ವಿ, ಕೊಕ್ಕಡ ಆರೋಗ್ಯ ಕೇಂದ್ರದ ಶೈಬಿ ಯು.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂದ್ಯಕೂಟದಲ್ಲಿ ಸುಮಾರು 60 ತಂಡಗಳು ಭಾಗವಹಿಸಿದ್ದವು. ವಿವಿಧ ವಿಭಾಗಗಳಲ್ಲಿ ತೀವ್ರ ಪೈಪೋಟಿ ನಡೆಯಿತು ಮತ್ತು ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಶಿಬು ವರ್ಗಿಸ್ ಅವರು ಪಂದ್ಯಕೂಟವನ್ನು ಸಂಘಟಿಸಿದರು. ಶಾಜಿ ಯು.ವಿ ಸ್ವಾಗತಿಸಿ, ವಂದಿಸಿದರು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ ಅಧ್ಯಕ್ಷ ಪ್ರಕಾಶ್ ಕೆ.ವೈ ಕಾರ್ಯಕ್ರಮ ನಿರೂಪಿಸಿದರು.

  •  

Leave a Reply

error: Content is protected !!