

ನೆಲ್ಯಾಡಿ: ನೆಲ್ಯಾಡಿಯ ಪವಿತ್ರ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅಭಿಷೇಕಗೊಂಡ ಪರಮಪೂಜ್ಯ ಬಿಷಪ್ ಫಾ. ಜೇಮ್ಸ್ ಪಟ್ಟೇರಿಲ್ ಸಿ.ಎಂ.ಎಫ್ ಅವರಿಗೆ ಶನಿವಾರ ಅದ್ದೂರಿ ಭವ್ಯ ಸ್ವಾಗತ ಸಮಾರಂಭ ನೆರವೇರಿತು.
ಸಂತ ಅಲ್ಫೋನ್ಸ ಕ್ಷೇತ್ರದ ಸರ್ವ ಸದಸ್ಯರು, ಭಕ್ತರು, ಟ್ರಸ್ಟಿಗಳು ಮತ್ತು ನಾಡಿನ ಗಣ್ಯರ ಸಾನ್ನಿಧ್ಯದಲ್ಲಿ ಬಿಷಪ್ರನ್ನು ಗೌರವಿಸಿ ಬರಮಾಡಿಕೊಳ್ಳಲಾಯಿತು. ವಿಶೇಷ ಕಾರ್ಯಕ್ರಮದ ವೇಳೆ ನೂತನ ಧರ್ಮಾಧ್ಯಕ್ಷರು ಮಾತನಾಡಿ ನಾಡಿನ ಅಭಿವೃದ್ಧಿಗೆ ಐಕ್ಯಮತ್ಯವೇ ಶಕ್ತಿ. ಧಾರ್ಮಿಕ–ಸಾಮಾಜಿಕ ಎಲ್ಲಾ ವರ್ಗಗಳ ಒಗ್ಗಟ್ಟಿನಿಂದ ಸಮಾಜದ ಪ್ರಗತಿಗೆ ನಿರಂತರ ಶ್ರಮಿಸಲಿದ್ದೇವೆ ಎಂದು ತಮ್ಮ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಬಿಷಪ್ ಲಾರೆನ್ಸ್ ಮುಕ್ಕುಯಿ, ಚರ್ಚ್ನ ಧರ್ಮಗುರುಗಳಾದ ಫಾ.ಶಾಜಿ ಮಾತ್ಯು, ಫಾ.ಅಲೆಕ್ಸ್, ರೀಜನಲ್ ಸುಪಿರಿಯರ್ ಸಿಸ್ಟರ್ ಲಿಸ್ ಮಾತ್ಯು ಎಸ್.ಹೆಚ್. ಉಪಸ್ಥಿತರಿದ್ದರು.
ಟ್ರಸ್ಟಿಗಳಾದ ಜೋನ್ಸನ್ ಪುಳಿಕ್ಕಲ್, ರಾಜೇಶ್ ತೆಕ್ಕಿನಾಟ್ಟು, ರೆಜಿ ಕೊಳಂಗರಾತ್, ಜೋಯ್ ಪುತ್ತೆನ್ಪರಂಭಿಲ್ ಹಾಗೂ ಸಂಯೋಜಕರಾಗಿ ಜೋರ್ಜ್ ಕುಟ್ಟಿ ಆಯಾಮ್ ಕುಡಿ ಮೊದಲಾದವರು ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದರು.






