

ನೆಲ್ಯಾಡಿ: ಸುಳ್ಯ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆದ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪದಕಗಳನ್ನು ಪಡೆದುಕೊಂಡಿದ್ದಾರೆ.
ಕಟ, ಕುಮಿಟೆಯಲ್ಲಿ ಅಶ್ವಿತಾ ಪ್ರಥಮ, ಕುಮಿಟೆಯಲ್ಲಿ ಆಯಿಷತ್ ಶಹ್ಮಾ ಪ್ರಥಮ. ಕಟದಲ್ಲಿ ಆಶಿನ್ ಡಿ., ಸಿಯಾನ್ ಜಿನಿ, ಸ್ಯಾಂಚೋ ಜಾರ್ಜ್, ಧನಶ್ರೀ, ಕಿಶನ್ ಎಸ್.ಕೆ. ಗೌಡ, ಆಯಿಷತುಲ್ ರಿಫಾ ದ್ವಿತೀಯ, ಕುಮಿಟೆಯಲ್ಲಿ ಸಿಯಾನ್ ಜಿನಿ, ಧನಶ್ರೀ ದ್ವಿತೀಯ. ಕುಮಿಟೆಯಲ್ಲಿ ಅನಿಲ್, ವಿಭಶ್ರೀ, ಸ್ಯಾಂಚೋ ಜಾರ್ಜ್, ಆಯಿಷತುಲ್ ರಿಫಾ, ಮಹಮ್ಮದ್ ರಿಶಾದ್ ತೃತೀಯ. ಕಟದಲ್ಲಿ ವಿಭಶ್ರೀ, ಕಿಶನ್ ಎಸ್.ಕೆ. ಗೌಡ, ಅಭಿನವ್ ರಾಜ್, ಮಹಮ್ಮದ್ ರಿಶಾದ್, ಆಯಿಷತ್ ಶಹ್ಮಾ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿಯನ್ನು ಚಂದ್ರಶೇಖರ ಕನಕಮಜಲು ನೀಡಿದ್ದಾರೆ.
ವಿದ್ಯಾರ್ಥಿಗಳ ಈ ಶ್ರೇಷ್ಠ ಸಾಧನೆಗೆ ಸಂಸ್ಥೆಯ ಸಂಚಾಲಕ ಫಾ.ಹನಿ ಜೇಕಬ್, ಸಹ ಸಂಚಾಲಕ ಡೀಕನ್ ಜಾರ್ಜ್, ಮುಖ್ಯಶಿಕ್ಷಕ ಸಿಬಿಚ್ಚನ್ ಟಿ.ಸಿ, ಸಂಯೋಜಕ ಯಶೋಧರ ಕೆ., ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಹಾರ್ದಿಕ ಅಭಿನಂದನೆ ಸಲ್ಲಿಸಿದರು.






