

ನೆಲ್ಯಾಡಿ:ಕೌಕ್ರಾಡಿ ಗ್ರಾಮದ ಹೊಸಮಜಲು ನಿವಾಸಿ, ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಮುಖ್ಯಶಿಕ್ಷಕ ಎಂ.ಐ.ತೋಮಸ್ ಅವರ ತಾಯಿ ಮರಿಯಮ್ಮ ಕೆ.ವಿ(92) ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ಸಂಜೆ ನಿಧನ.
ಮೃತರ ಮಕ್ಕಳಾದ ನಿವೃತ್ತ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಎಂ.ಐ. ಸ್ಯಾಮುವೆಲ್, ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಎಂ ಐ ತೋಮಸ್, ಶೃಂಗೇರಿ ತಾಲೂಕು ಪಂಚಾಯತಿನ ನಿವೃತ್ತ ದ್ವಿತೀಯ ದರ್ಜೆ ಸಹಾಯಕ ಎಂ.ಐ. ವರ್ಗಿಸ್, ಕೃಷಿಕ ಎಂ.ಐ. ಸ್ಟೀಫನ್ ಹಾಗೂ ಮಗಳಾದ ಸೂಸಮ್ಮ ಅವರನ್ನು ಅಗಲಿದ್ದಾರೆ.






