ಜೆಸಿಐ ಕೊಕ್ಕಡ ಕಪಿಲಾ 2026ರ ಪದಗ್ರಹಣ ಸಮಾರಂಭ

ಶೇರ್ ಮಾಡಿ

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ಘಟಕದ 2026ನೇ ಸಾಲಿನ ಪದಗ್ರಹಣ ಸಮಾರಂಭ ಮಂಗಳವಾರದಂದು ಕೊಕ್ಕಡದ ಸಂತ ಜೋನರ ಶಾಲಾ ಸಭಾಂಗಣದಲ್ಲಿ ಜರುಗಿತು.

ಮುಖ್ಯಅತಿಥಿಯಾಗಿ ಆಗಮಿಸಿದ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ವೈದ್ಯ ಡಾ.ಶಮಂತ್ ವೈ.ಕೆ. ಅವರು ಮಾತನಾಡಿ, ಜೆಸಿಐ ವೇದಿಕೆ ಯುವಜನತೆಗೆ ನಾಯಕತ್ವ, ಸೇವಾಭಾವ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಅತ್ಯುತ್ತಮ ವೇದಿಕೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಶೋಭಾ ಪಿ. ಅವರು 2025ನೇ ಸಾಲಿನ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿ, ಸಂಘಟನೆಯ ಸಾಧನೆಗಳನ್ನು ನೆನಪಿಸಿದರು.

ಅತಿಥಿಯಾಗಿ ಆಗಮಿಸಿದ ಬಿ ಪ್ರಾಂತ್ಯದ ವಲಯ ಉಪಾಧ್ಯಕ್ಷ ಜಿತೇಶ್ ಎಲ್. ಪಿರೇರಾ ಅವರು ಮಾರ್ಗದರ್ಶನ ನೀಡುತ್ತಾ, ಸಂಘಟನೆಯ ಮುಂದಿನ ಕಾರ್ಯಯೋಜನೆಗಳಿಗೆ ಶುಭಹಾರೈಸಿದರು. ವೇದಿಕೆಯಲ್ಲಿ ನಿಕಟಪೂರ್ವಾಧ್ಯಕ್ಷರಾದ ಸಂತೋಷ್ ಜೈನ್, ಕಾರ್ಯದರ್ಶಿ ಚಂದನಾ ಪಿ., ಯುವ ಜೆಸಿ ಅಧ್ಯಕ್ಷ ಶ್ರವಣ್, ಜೆಸಿಲೆಟ್ ದಕ್ಷಾ ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಿತೇಶ್ ಎಂ. ಸ್ಟ್ರೆಲ್ಲಾ ಅವರು ಜೆಸಿಐ ಕೊಕ್ಕಡ ಕಪಿಲಾ ಘಟಕದ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಜೆಸಿಐ ಮೌಲ್ಯಗಳು ಹಾಗೂ ಸೇವಾ ಸಂಕಲ್ಪವನ್ನು ಮುಂದುವರಿಸುವುದಾಗಿ ಅವರು ಭರವಸೆ ನೀಡಿದರು.

2026ನೇ ಸಾಲಿನ ಪದಾಧಿಕಾರಿಗಳಾಗಿ ರೇಶ್ಮಿ ಡಿಸೋಜ, ಆದ್ಯಾ ಜೈನ್, ವಿಯೋನ್ ಸುವಾರಿಸ್, ಜೋಯ್ ಬೊತೆಲ್ಲೊ, ದೀಪಿಕಾ, ವಿಕ್ಟರ್ ಸುವಾರಿಸ್, ಜಸ್ವಂತ್ ಪಿರೇರಾ, ದೀಪಾ ವಿ., ಯೋಗಿಶ್ ಎಸ್., ಪ್ರಿಯಾ ಜೆ. ಅಮೀನ್ ಅವರು ಅಧಿಕಾರ ಸ್ವೀಕರಿಸಿದರು. ಪೂರ್ವಾಧ್ಯಕ್ಷ ಶ್ರೀಧರ ರಾವ್, ಮಾರ್ಗದರ್ಶಿ ಸಮಿತಿಯ ಜೋಸೆಫ್ ಪಿರೇರಾ, ಜೆಸಿಂತಾ ಡಿ’ಸೋಜ, ಜ್ಯೋತಿ ಹೆಬ್ಬಾರ್, ಜೆನೆವಿವ್ ಫೆರ್ನಾಂಡಿಸ್ ಅವರು ಸಂಘಟನೆಯ ಕಾರ್ಯಗಳಿಗೆ ಸಹಕಾರ ನೀಡಿದರು.

ಸಮಾರಂಭದಲ್ಲಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಮುರಳೀಧರ, ನಿತ್ಯಾನಂದ ರೈ, ಶಶಿಧರ ನೆಕ್ಕಿಲಾಡಿ, ದತ್ತಾತ್ರೇಯ ಹೆಬ್ಬಾರ್, ಡಾ. ಸುಧಾಕರ್ ಶೆಟ್ಟಿ, ಲವೀನಾ ಪಿಂಟೋ, ಮನೋರಮಾ ಟಿ., ರಫಾಯೆಲ್ ಸ್ಟ್ರೆಲ್ಲಾ, ಡೈಸಿ ಗಲ್ಬಾವೊ ಸೇರಿದಂತೆ ಹಲವಾರು ಗಣ್ಯರು, ಜೆಸಿಐ ಸದಸ್ಯರು ಹಾಗೂ ಆಹ್ವಾನಿತರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.

ಧನುಷ್ ಕುಮಾರ್ ಜೈನ್ ಅವರು ಜೆಸಿ ವಾಣಿಯನ್ನು ವಾಚಿಸಿದರು. ಪ್ರಜ್ವಲ್ ಲೋಬೊ, ಅಕ್ಷತ್ ರೈ ಹಾಗೂ ರೇಷ್ಮಾ ಡಿ’ಅಲ್ಮೇಡಾ ಅವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ವಲಯದ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ ಅವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ನೂತನ ಕಾರ್ಯದರ್ಶಿ ಜೋಯಲ್ ಪಿರೇರಾ ವಂದಿಸಿದರು.

  •  

Leave a Reply

error: Content is protected !!