ಜೆಸಿಐ ನೆಲ್ಯಾಡಿ ನೂತನ ಪದಾಧಿಕಾರಿಗಳ ಆಯ್ಕೆ: 2026ರ ಅಧ್ಯಕ್ಷರಾಗಿ ಜೆಸಿ ಪ್ರವೀಣಿ ಸುಧಾಕರ್ ಶೆಟ್ಟಿ

ಶೇರ್ ಮಾಡಿ
ASHWINI HOSPITAL NELLYADI

ನೆಲ್ಯಾಡಿ: ಜೆಸಿಐ ನೆಲ್ಯಾಡಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜ.3ರಂದು ನೆಲ್ಯಾಡಿಯ ಗೌರಿಜಾಲ್ ಆರ್ಕೇಡ್‌ನಲ್ಲಿ ನಡೆಯಿತು. ಜೆಸಿಐ ನೆಲ್ಯಾಡಿಯ ಅಧ್ಯಕ್ಷ ಜೆಸಿ ಡಾ.ಸುಧಾಕರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ, ಚುನಾವಣಾ ಅಧಿಕಾರಿ ಜೆಸಿ ಸುಚಿತ್ರ ಬಂಟ್ರಿಯಲ್ ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನೆರವೇರಿತು.

ಈ ವೇಳೆ ಜೆಸಿಐ ನೆಲ್ಯಾಡಿಯ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಜೆಸಿ ಪ್ರವೀಣಿ ಸುಧಾಕರ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಶ್ರೇಯಸ್ ಶೆಟ್ಟಿ, ಮಹಿಳಾ ಜೆಸಿ ಸಂಯೋಜಕರಾಗಿ ನವ್ಯ ಪ್ರಸಾದ್, ಕೋಶಾಧಿಕಾರಿಯಾಗಿ ಹರೀಶ್ ರೈ ಅಮುಂಜ, ಜೆಜೇಸಿ ಅಧ್ಯಕ್ಷರಾಗಿ ಕಾರ್ತಿಕ್ ಆಯ್ಕೆಯಾದರು.

ಜೆಜೆಸಿ ಸಂಯೋಜಕರಾಗಿ ಜೆಸಿ ವಿಶ್ವನಾಥ ಶೆಟ್ಟಿ, ಆಡಳಿತ ವಿಭಾಗದ ಉಪಾಧ್ಯಕ್ಷರಾಗಿ ಇಸ್ಮಾಯಿಲ್, ವ್ಯವಹಾರ ವಿಭಾಗದ ಉಪಾಧ್ಯಕ್ಷರಾಗಿ ಲೀಲಾಮೋಹನ್, ತರಬೇತಿ ವಿಭಾಗದ ಉಪಾಧ್ಯಕ್ಷರಾಗಿ ಜಾಹ್ನವಿ, ಸಮುದಾಯ ವಿಭಾಗದ ಉಪಾಧ್ಯಕ್ಷರಾಗಿ ಸೌಮ್ಯ ವಿಶ್ವನಾಥ್ ಶೆಟ್ಟಿ, ಕಾರ್ಯಕ್ರಮ ವಿಭಾಗದ ಉಪಾಧ್ಯಕ್ಷರಾಗಿ ವಿನ್ಯಾಸ್ ಬಂಟ್ರಿಯಲ್ ಅವರನ್ನು ಆಯ್ಕೆ ಮಾಡಲಾಯಿತು. ಜೊತೆ ಕಾರ್ಯದರ್ಶಿಯಾಗಿ ಸುಪ್ರಿತಾ ರವಿಚಂದ್ರ ಹಾಗೂ ಪ್ರಗತಿ ಸಂಪಾದಕರಾಗಿ ವಿನಯ್ ರಾವ್ ನೇಮಕಗೊಂಡರು.

ನಿರ್ದೇಶಕರಾಗಿ ರಹಿಮಾನ್, ರಶ್ಮ ದಯಾಕರ್, ವಿಮಲ್ ಕುಮಾರ್, ಸತೀಶ್ ಕೆ.ಎಸ್., ಮಿಥುನ್, ಹರೀಶ್ ಬಾರಿಂಜ ಹಾಗೂ ಅಶೋಕ್ ರೈ ಅಮುಂಜ ಅವರನ್ನು ಆಯ್ಕೆ ಮಾಡಲಾಯಿತು.

ಜೆಸಿಐ ನೆಲ್ಯಾಡಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಜ.29ರಂದು ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿದೆ.

  •  

Leave a Reply

error: Content is protected !!