

ಕೊಕ್ಕಡ: ಕೊಕ್ಕಡ ಗ್ರಾಮದ ಆಲಡ್ಕ ನಿವಾಸಿ ದಿ.ಕೊರಗಪ್ಪ ಆಚಾರ್ಯ ಅವರ ಪುತ್ರ ಪ್ರಕಾಶ್ ಆಚಾರ್ಯ (43) ಅವರು ಸೋಮವಾರ ಮಧ್ಯಾಹ್ನ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾದರು.
ಮೃತ ಪ್ರಕಾಶ್ ಆಚಾರ್ಯ ಅವರು ತಮ್ಮ ಮನೆಯ ಸಮೀಪದಲ್ಲಿರುವ ಮರದ ಕೆಲಸ ನಿರ್ವಹಿಸುವ ಕಟ್ಟಡದಲ್ಲಿ ದಿನನಿತ್ಯದಂತೆ ಕೆಲಸ ಮಾಡುತ್ತಿದ್ದ ವೇಳೆ ಅಚಾನಕ್ ಹೃದಯಾಘಾತಕ್ಕೆ ಒಳಗಾದರು. ತಕ್ಷಣವೇ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರೊಳಗೆ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸದಾ ದುಡಿಯುವ ಸ್ವಭಾವ ಹೊಂದಿದ್ದ ಪ್ರಕಾಶ್ ಆಚಾರ್ಯ ಅವರು ಮೂವರು ಸಹೋದರರು ಹಾಗೂ ಐದು ಸಹೋದರಿಯರನ್ನು ಅಗಲಿದ್ದಾರೆ.






