ಕೊಕ್ಕಡ: ಹಳ್ಳಿಂಗೇರಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಜೀರ್ಣೋದ್ಧಾರಕ್ಕೆ 1.50 ಲಕ್ಷ ರೂ. ದೇಣಿಗೆ

ಶೇರ್ ಮಾಡಿ

ಹಳ್ಳಿಂಗೇರಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಜೀರ್ಣೋದ್ಧಾರ ಹಾಗೂ ನೂತನ ಮಂದಿರ ನಿರ್ಮಾಣ ಕಾರ್ಯಕ್ಕೆ ಕೊಲ್ಲಾಜೆಪಳಿಕೆ ನಿವಾಸಿ ಸುಂದರಿ ಕುಂಞಪ್ಪ ಗೌಡ ಅವರು ₹1,50,111 ಮೊತ್ತವನ್ನು ದೇಣಿಗೆ ನೀಡಿ ಸಹಕರಿಸಿರುತ್ತಾರೆ.

ಈ ಹಿಂದೆಯೂ ಅನೇಕ ಧಾರ್ಮಿಕ, ಸಾಮಾಜಿಕ ಹಾಗೂ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸಹಾಯ ಹಸ್ತ ಚಾಚುತ್ತಾ ಬಂದಿರುವ ಸುಂದರಿ ಕುಂಞಪ್ಪ ಗೌಡ ಅವರು, ಇದೀಗ ನೂತನ ಮಂದಿರ ನಿರ್ಮಾಣದ ಮಹತ್ವದ ಹಂತದಲ್ಲಿ ದೊಡ್ಡ ಮೊತ್ತವನ್ನು ನೀಡುವ ಮೂಲಕ ಜೀರ್ಣೋದ್ಧಾರ ಕಾರ್ಯಕ್ಕೆ ಮಹತ್ವದ ಸಹಕಾರ ನೀಡಿದ್ದಾರೆ.

ಈ ಸಂಧರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರುಕ್ಮಯ ಮಡಿವಾಳ, ಕಾರ್ಯದರ್ಶಿ ಲೊಕೇಶ್ ಕೆಂಪಕೋಡಿ, ಭಜನಾ ಮಂದಿರದ ಅಧ್ಯಕ್ಷ ವಿಶ್ವನಾಥ ಕೊಡಿಂಗೇರಿ, ಶಶಿ ತಿಪ್ಪಮಜಲು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದು, ದಾನಿಗಳಾದ ಸುಂದರಿ ಕುಂಞಪ್ಪ ಗೌಡ ಅವರಿಗೆ ಅಭಿನಂದನೆ ಸಲ್ಲಿಸಿ ಕೃತಜ್ಞತೆ ವ್ಯಕ್ತಪಡಿಸಿದರು.

  •  

Leave a Reply

error: Content is protected !!