


ಕೊಕ್ಕಡ: ಟೀಂ ಸುಹಾಸ್ ಶೆಟ್ಟಿ ಕೊಕ್ಕಡ ಇದರ ಆಶ್ರಯದಲ್ಲಿ, ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಫೆ.01 ರಂದು ಕೊಕ್ಕಡ ಶ್ರೀ ರಾಮ ಸೇವಾ ಮಂದಿರದಲ್ಲಿ ಆಯೋಜಿಸಲಿರುವ ದಿ| ಸುಹಾಸ್ ಶೆಟ್ಟಿ ಬಜ್ಪೆ ಅವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರದ ಆಮಂತ್ರಣ ಪತ್ರಿಕೆಯನ್ನು ಗುರುವಾರದಂದು ಬೆಳಗ್ಗೆ ಕೊಕ್ಕಡದ ಶ್ರೀ ವ್ಯೆದ್ಯನಾಥೇಶ್ವರ ವಿಷ್ಣುಮೂರ್ತಿ ದೇವಾಸ್ಥಾನದಲ್ಲಿ ವಿಧಿವತ್ತಾಗಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜಮುಖಿ ಚಿಂತನೆ ಹಾಗೂ ಮಾನವೀಯ ಸೇವೆಯ ಮಹತ್ವವನ್ನು ಸ್ಮರಿಸಿಕೊಂಡು, ರಕ್ತದಾನ ಶಿಬಿರದ ಮೂಲಕ ಅಗತ್ಯವಿರುವ ರೋಗಿಗಳಿಗೆ ನೆರವಾಗುವ ಸಂಕಲ್ಪವನ್ನು ವ್ಯಕ್ತಪಡಿಸಲಾಯಿತು. ದಿ| ಸುಹಾಸ್ ಶೆಟ್ಟಿ ಬಜ್ಪೆ ಅವರ ಸ್ಮರಣಾರ್ಥ ನಡೆಯುವ ಈ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆಯನ್ನು ಆಯೋಜಕರು ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಟೀಂ ಸುಹಾಸ್ ಶೆಟ್ಟಿ ಕೊಕ್ಕಡ ಇದರ ಸದಸ್ಯರಾದ ಸಚಿನ್ ಬಜ, ರಂಜು ಕೊಕ್ಕಡ, ದೀಕ್ಷಿತ್ ಕೊಕ್ಕಡ, ಯತೀಶ್ ಕೊಕ್ಕಡ, ಸದಾನಂದ ಕೊಕ್ಕಡ, ಸಂದೀಪ್ ಭಂಡಾರಿ, ಪವನ್ ಪೆಲತ್ತಿಂಜ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಫೆ.01ರಂದು ನಡೆಯಲಿರುವ ಬೃಹತ್ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಮಾನವೀಯ ಸೇವೆಗೆ ಕೈಜೋಡಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.





