ಜ.9ರಂದು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ಎಲುಬಿನ ಖನಿಜ ಸಾಂದ್ರತೆ ಹಾಗೂ ಕಣ್ಣಿನ ತಪಾಸಣಾ ಶಿಬಿರ

ಶೇರ್ ಮಾಡಿ

ನೆಲ್ಯಾಡಿ: ಸಾರ್ವಜನಿಕರ ಆರೋಗ್ಯ ಜಾಗೃತಿಯ ಉದ್ದೇಶದಿಂದ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಯ ವತಿಯಿಂದ ಜ. 9ರಂದು ಶುಕ್ರವಾರ ಬೆಳಗ್ಗೆ 10:00ರಿಂದ ಮಧ್ಯಾಹ್ನ 2:00 ಗಂಟೆಯವರೆಗೆ ಉಚಿತ ಎಲುಬಿನ ಖನಿಜ ಸಾಂದ್ರತೆ (Bone Mineral Density – BMD) ಪರೀಕ್ಷಾ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಎಲುಬು ಕ್ಷಯ, ಆಸ್ಟಿಯೋಪೋರೋಸಿಸ್ ಸೇರಿದಂತೆ ವಿವಿಧ ಎಲುಬು ಸಂಬಂಧಿತ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವ ಉದ್ದೇಶದಿಂದ ಈ ಉಚಿತ BMD ಪರೀಕ್ಷೆ ನಡೆಸಲಾಗುತ್ತಿದ್ದು, ವೃದ್ಧರು, ಮಹಿಳೆಯರು ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆ ಹೊಂದಿರುವವರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಅವಕಾಶವಿದೆ. ಜೊತೆಗೆ ಕಣ್ಣು ಸಂಬಂಧಿತ ಸಮಸ್ಯೆಗಳ ಪತ್ತೆ ಹಾಗೂ ಸಲಹೆಗಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರವೂ ನಡೆಯಲಿದೆ.

ಅನುಭವೀ ವೈದ್ಯರು ಹಾಗೂ ತಜ್ಞ ಸಿಬ್ಬಂದಿಗಳಿಂದ ತಪಾಸಣೆ ಹಾಗೂ ಅಗತ್ಯ ಸಲಹೆ ನೀಡಲಾಗುವುದು ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. ಆರೋಗ್ಯದ ಕುರಿತು ನಿರ್ಲಕ್ಷ್ಯ ವಹಿಸದೇ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿರುವುದರಿಂದ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಅಶ್ವಿನಿ ಆಸ್ಪತ್ರೆ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.

  •  

Leave a Reply

error: Content is protected !!