ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಟಾಟಾ ಇಂಡಿಕಾ ಕಾರು ಕೊಡುಗೆ

ಶೇರ್ ಮಾಡಿ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಮೈಸೂರು ಮೂಲದ ಸತೀಶ್ ಎಂಬವರು ತಾವು ಪ್ರಥಮವಾಗಿ ಖರೀದಿಸಿದ 2009 ಮಾದರಿಯ ಉತ್ತಮ ಕಂಡೀಷನ್ ಹೊಂದಿರುವ ಟಾಟಾ ಇಂಡಿಕಾ ಕಾರನ್ನು ಕೊಡುಗೆಯಾಗಿ ನೀಡಿದ್ದಾರೆ.

ಈ ವಾಹನಕ್ಕೆ 2030ರವರೆಗೆ ಫಿಟ್ನೆಸ್ ಸರ್ಟಿಫಿಕೇಟ್ (ಎಫ್.ಸಿ) ಮಾನ್ಯತೆ ಇದ್ದು, ಸುಸಜ್ಜಿತ ಸ್ಥಿತಿಯಲ್ಲಿದೆ. ದೇವಳದ ದೈನಂದಿನ ಕಾರ್ಯಗಳು, ಸೇವಾ ಕಾರ್ಯಗಳು ಹಾಗೂ ಅಗತ್ಯ ವ್ಯವಸ್ಥಾಪನಾ ಕೆಲಸಗಳಿಗೆ ಈ ಕಾರನ್ನು ಉಪಯೋಗಿಸಿಕೊಳ್ಳುವಂತೆ ದಾನಿದಾರರು ಹೇಳಿದ್ದಾರೆ. ಭಕ್ತಿಭಾವದಿಂದ ನೀಡಿದ ಈ ಕಾರು ಕೊಡುಗೆ ದೇವಳದ ಸೇವಾ ಕಾರ್ಯಗಳಿಗೆ ಸಹಕಾರಿಯಾಗಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಮಣ್ಯ ಶಬರಾಯ ತಿಳಿಸಿದ್ದಾರೆ.

Leave a Reply

error: Content is protected !!