



ನೆಲ್ಯಾಡಿ: ಜೆಸಿಐ ನೆಲ್ಯಾಡಿ ಘಟಕದ 43ನೇ ಅಧ್ಯಕ್ಷೆ ಪ್ರವೀಣಿ ಸುಧಾಕರ್ ಶೆಟ್ಟಿ ಹಾಗೂ ಘಟಕ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಗುರುವಾರ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನೆರವೇರಿತು.


ವಲಯ 15ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಘಟಕ ಅಧ್ಯಕ್ಷರಿಗೆ ದೂರದೃಷ್ಟಿ, ನಮ್ರತೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಅಗತ್ಯ. ಸದಸ್ಯರೊಂದಿಗೆ ಭಾವನಾತ್ಮಕ ಬಾಂಧವ್ಯ ಬೆಳೆಸಿದಾಗ ಜೇಸಿಯ ಶಕ್ತಿ ಹೆಚ್ಚುತ್ತದೆ. ಈ ವರ್ಷ ಘಟಕಗಳಿಗೆ ನದಿಗಳ ಹೆಸರನ್ನು ಇಡಲಾಗಿದೆ ನದಿ ಕೊಳಚೆಗಳನ್ನು ತೊಳೆದು ಸಮುದ್ರ ಸೇರುವಂತೆ, ಪ್ರತಿಯೊಬ್ಬ ಸದಸ್ಯರು ಉತ್ತಮ ಜೇಸಿಯಾಗಿ, ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು ಎಂದು ಸಂದೇಶ ನೀಡಿದರು.

ನೆಲ್ಯಾಡಿ ಎಲೈಟ್ ರಬ್ಬರ್ ಇಂಡಸ್ಟ್ರೀಸ್ ಮಾಲಕ ಶಾಜಿ ವರ್ಗೀಸ್ ಮಾತನಾಡಿ, ಒಂದೇ ದಿನದಲ್ಲಿ 10 ಹೊಸ ಸದಸ್ಯರ ಸೇರ್ಪಡೆ ನೆಲ್ಯಾಡಿ ಜೇಸಿಗೆ ಹೆಮ್ಮೆಯ ಸಂಗತಿ ಎಂದು ಪ್ರಶಂಸಿಸಿದರು. ನೆಲ್ಯಾಡಿ ಜೇಸಿ ಸಮಾಜಮುಖಿ ಕೆಲಸಗಳಿಗೆ ಮಾದರಿಯಾಗಿದೆ, ಮುಂದಿನ ದಿನಗಳಲ್ಲಿ ರಾಜ್ಯ–ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುವ ಸಾಮರ್ಥ್ಯವಿದೆ ಎಂದರು.

ಅಧಿಕಾರ ಹಸ್ತಾಂತರ:
ಪೂರ್ವಾರ್ಧದಲ್ಲಿ ಸಭಾಧ್ಯಕ್ಷತೆಯನ್ನು ವಹಿಸಿದ ಡಾ.ಸುಧಾಕರ್ ಶೆಟ್ಟಿ ಅವರು ಎಲ್ಲರನ್ನು ಸ್ವಾಗತಿಸಿ, ಗತಕಾಲದ ವರದಿಯನ್ನು ವಾಚಿಸಿ, ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಶಾಲು ಹೊದಿಸಿ, ಸ್ಮರಣೆಕೆಯನ್ನು ನೀಡಿ ಗೌರವಿಸಿದರು. ನೂತನ ಅಧ್ಯಕ್ಷೆ ಪ್ರವೀಣಿ ಸುಧಾಕರ್ ಶೆಟ್ಟಿ ಅವರಿಗೆ ನಿರ್ಗಮನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಪಿನ್ ತೊಡಿಸಿ ಅಧಿಕಾರ ಹಸ್ತಾಂತರ ಮಾಡಿದರು.ನಿರ್ಗಮನ ಕಾರ್ಯದರ್ಶಿ ನವ್ಯ ಪ್ರಸಾದ್ ಅವರು ಶ್ರೇಯಸ್ ಶೆಟ್ಟಿಗೆ, ಮಹಿಳಾ ಜೇಸಿ ಅಧ್ಯಕ್ಷೆ ಪ್ರವೀಣಿ ಶೆಟ್ಟಿ ಅವರು ನವ್ಯ ಪ್ರಸಾದ್‌ಗೆ ಹಾಗೂ ಜೆಜೆಸಿ ಮಂಜಿತ್ ಎಂ.ಕೆ ಅವರು ಕಾರ್ತಿಕ್‌ಗೆ ಅಧಿಕಾರ ಹಸ್ತಾಂತರಿಸಿದರು. ಅಧ್ಯಕ್ಷೆ ಪ್ರವೀಣಿ ಶೆಟ್ಟಿ ನೂತನ ಆಡಳಿತ ಮಂಡಳಿ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.

ಹೊಸ ಸದಸ್ಯರಿಗೆ ಪ್ರಮಾಣವಚನ:
ವಲಯ 15ರ ಉಪಾಧ್ಯಕ್ಷ ಜಿತೇಶ್ ಪಿರೇರಾ ಅವರು ನೆಲ್ಯಾಡಿ ಜೇಸಿಐ ಘಟಕಕ್ಕೆ ನೂತನ ಸದಸ್ಯರಾಗಿ ಸೇರ್ಪಡೆಗೊಂಡ ಸಂಕೇತ್ ಶೆಟ್ಟಿ, ವಿನೋದ್ ಕುಮಾರ್, ಸಾಯಿಧೃತಿ ಶೆಟ್ಟಿ, ಕೇಶವ ನೆಲ್ಯಾಡಿ, ರೇಷ್ಮಾ ಪಿ, ನಮಿತಾ ಹರೀಶ್ ಶೆಟ್ಟಿ, ದೀಪಕ್ ಬಿ.ಎಸ್, ದೀಪಿಕಾ ಡಿ.ಎಮ್, ಮನ್ವಿತಾ ಹೆಗ್ಡೆ, ಪ್ರಶಾಂತ್ ಕುಮಾರ್ ಕೊಪ್ಪ ಇವರಿಗೆ ಪ್ರಮಾಣವಚನ ಬೋಧಿಸಿ, ಜೇಸಿ ಪಿನ್ ಪ್ರದಾನ ಮಾಡಿದರು.
ಸನ್ಮಾನ:
ನೆಲ್ಯಾಡಿ ಜೆಸಿಐ ಘಟಕದ ವತಿಯಿಂದ ಸಂತೋಷ್ ಶೆಟ್ಟಿ, ಶಾಜಿ ವರ್ಗೀಸ್ ಹಾಗೂ ನಿಕಟಪೂರ್ವ ಅಧ್ಯಕ್ಷೆ ಸುಚಿತ್ರ ಜೆ ಬಂಟ್ರಿಯಲ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲೀಲಾ ಮೋಹನ್ ಜೇಸಿ ವಾಣಿ ವಾಚಿಸಿದರು, ಪೂರ್ವಾಧ್ಯಕ್ಷ ರವೀಂದ್ರ.ಟಿ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ದಯಾಕರ್ ರೈ, ಹರೀಶ್ ರೈ ಸಹಕರಿಸಿದರು. ಶ್ರೇಯಸ್ ಶೆಟ್ಟಿ ವಂದಿಸಿದರು.





