



ಕೊಕ್ಕಡ: ಬೆಳ್ತಂಗಡಿ ತಾಲೂಕಿನಲ್ಲಿ ಇದುವರೆಗೆ ನಡೆದಿರುವ ರಕ್ತದಾನ ಶಿಬಿರಗಳಲ್ಲಿ ಅತಿ ದೊಡ್ಡ ಪ್ರಮಾಣದ ರಕ್ತ ಸಂಗ್ರಹಣೆ ಮಾಡಿ 331 ಯೂನಿಟ್ಸ್ ಎಂಬ ಐತಿಹಾಸಿಕ ದಾಖಲೆ ಸೃಷ್ಟಿಸಿರುವ ಕೊಕ್ಕಡದ ಬೃಹತ್ ರಕ್ತದಾನ ಶಿಬಿರವು ಫೆ.1ರಂದು ಕೊಕ್ಕಡದ ಶ್ರೀರಾಮ ಸೇವಾ ಮಂದಿರದಲ್ಲಿ ಅದ್ದೂರಿಯಾಗಿ ಜರಗಿತು. ಟೀಂ ಸುಹಾಸ್ ಶೆಟ್ಟಿ ಕೊಕ್ಕಡ ಇದರ ಆಶ್ರಯದಲ್ಲಿ, ನೈಮಿಷ ವೆಂಚರ್ಸ್ ಸೌತಡ್ಕ ಪ್ರಾಯೋಜಕತ್ವದಲ್ಲಿ, ಅನೇಕ ಸಂಘ-ಸಂಸ್ಥೆಗಳ ಸಕ್ರಿಯ ಸಹಭಾಗಿತ್ವದಲ್ಲಿ ನಡೆದ ಈ ಶಿಬಿರವು ಜರಗಿತು.

ಕಾರ್ಯಕ್ರಮವನ್ನು ದಿ|ಸುಹಾಸ್ ಶೆಟ್ಟಿ ಬಜ್ಪೆ ಅವರ ಸ್ಮರಣಾರ್ಥವಾಗಿ ಆಯೋಜಿಸಲಾಗಿದ್ದು, ಅವರ ಪೋಷಕರಾದ ಮೋಹನ್ ಶೆಟ್ಟಿ ಮತ್ತು ಸೂಲೋಚನ ಎಂ. ಶೆಟ್ಟಿ ದೀಪ ಪ್ರಜ್ವಲನೆ ಮೂಲಕ ಶಿಬಿರವನ್ನು ಉದ್ಘಾಟಿಸಿದರು.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಧಾರ್ಮಿಕ ಮುಖಂಡರಾದ ಡಿ.ಕಿರಣ್ ಚಂದ್ರ ಪುಷ್ಪಗಿರಿ, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷರು ಕೃಷ್ಣ ಭಟ್ ಹಿತ್ತಿಲು, ಕೊಕ್ಕಡ ಪ್ರಾ.ಕೃ.ಪ.ಸ.ಸಂಘ ಅಧ್ಯಕ್ಷರು ಹಾಗೂ ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಕನ್ಯಾಡಿ ಸೇವಾಭಾರತಿ ಸಂಸ್ಥಾಪಕ ಕೆ.ವಿನಾಯಕ ರಾವ್, ಸೌತಡ್ಕ ನೈಮಿಷ ವೆಂಚರ್ಸ್ ಉದ್ಯಮಿ ಬಾಲಕೃಷ್ಣ ನೈಮಿಷ, ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಸ್ಥಾಪಕ ಲೋಕೇಶ್ ಕೋಡಿಕೆರೆ, ಪಾರಿಜಾತ ಹೋಟೆಲ್ ಮಾಲಕ ಹಾಗೂ ಸೇವಾಭಾರತಿ ಕನ್ಯಾಡಿ ಆರೋಗ್ಯಮ್ ನ ಸಂಚಾಲಕ ಅಖಿಲೇಶ್ ಶೆಟ್ಟಿ ನೇತ್ರಾವತಿ, ಟೀಮ್ ಕಳವಾರಿನ ಸದಸ್ಯ ಸಚಿನ್ ಒಡ್ಡೂರು, ಬಜರಂಗದಳ ಕಾಟಿಪಳ್ಳ ಸುರತ್ಕಲ್ ನ ಸದಸ್ಯರು ಡಾ.ವಾಣಿಕ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ರೋ|ಡಾ.ರಾಮಕೃಷ್ಣ ರಾವ್, ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್ ಉಜಿರೆಯ ವೇದಾವತಿ ಜನಾರ್ಧನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಅವರು ರಕ್ತದಾನ ಮಾಡಿದ ಎಲ್ಲ ದಾನಿಗಳಿಗೆ ಮಧ್ ಭಗವದ್ಗೀತಾ ಪ್ರತಿಗಳನ್ನು ನೀಡಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ, 54 ಬಾರಿ ರಕ್ತದಾನ ಮಾಡಿರುವ ಹಿರಿಯ ಭಜಕರಾದ ಪುರುಷೋತ್ತಮ ಮಡ್ಯಲಗುಂಡಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಶಿಬಿರದ ಯಶಸ್ಸಿಗೆ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಸೇವಾಭಾರತಿ ಕನ್ಯಾಡಿ, ಶ್ರೀರಾಮ ಸೇವಾ ಮಂದಿರ ಕೊಕ್ಕಡ ಪ್ರಾ.ಕೃ.ಪ.ಸ.ಸಂಘ, ಉಜಿರೆ ಹವ್ಯಕ ವಲಯ, ಯುವ ಕೇಸರಿ ಕಾವು, ಸಿದ್ಧಿವಿನಾಯಕ ಸೇವಾ ಸಮಿತಿ ಗೋಳಿತೊಟ್ಟು, ಯುವಶಕ್ತಿ ಫ್ರೆಂಡ್ ಮುಂಡೂರುಪಳಿಕೆ, ಹಿಂದೂ ಜಾಗರಣ ವೇದಿಕೆ ಶಿಶಿಲ, ಟೀಂ ಸಿಂಧೂರ ನೆಲ್ಯಾಡಿ, ಅಶ್ವಥ ಗೆಳೆಯರ ಬಳಗ ಹೊಸಮಜಲು, ಶಿವಶಕ್ತಿ ಫ್ರೆಂಡ್ಸ್ ಕಳೆಂಜ, ವೀರ ಕೇಸರಿ ಅನಾರು, ಶಕ್ತಿ ಆಟೋ ಚಾಲಕ-ಮಾಲಕರ ಸಂಘ ಕೊಕ್ಕಡ, ವಿಶ್ವ ಹಿಂದೂ ಪರಿಷದ್-ಬಜರಂಗದಳದ ವಿವಿಧ ಶಾಖೆಗಳು, ಎಸ್‌ವಿಟಿ ಸ್ಪೋರ್ಟ್ಸ್ ಕ್ಲಬ್ ಪಟ್ರಮೆ, ಫ್ರೆಂಡ್ಸ್ ಧರ್ಮಸ್ಥಳ, ಶ್ರದ್ಧಾ ಗೆಳೆಯರ ಬಳಗ ಉಪ್ಪಾರಪಳಿಕೆ, ಟೀಂ ಪುಷ್ಪಗಿರಿ ಬೆಳ್ತಂಗಡಿ, ನವಶಕ್ತಿ ಆಟೋ ಚಾಲಕ-ಮಾಲಕರ ಸಂಘ ಅರಸಿನಮಕ್ಕಿ, ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಪಟ್ಲಡ್ಕ, ನಿಸರ್ಗ ಯುವಜನತೆ ಮಂಡಲ ಬರೆಂಗಾಯ-ನಿಡ್ಲೆ, ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್, ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ, ಅಶ್ವಸಿರಿ ಗೆಳೆಯರ ಬಳಗ ಪಾಂಡಿಬೆಟ್ಟು ಸೇರಿದಂತೆ ಅನೇಕ ಸಂಘಟನೆಗಳು ಸಹಕರಿಸಿದ್ದಾರೆ.
ಟೀಂ ಸುಹಾಸ್ ಶೆಟ್ಟಿ ಸದಸ್ಯ ರುಕ್ಮಯ್ಯ ಮಡಿವಾಳ ಸ್ವಾಗತಿಸಿದರು. ಕೇಶವ ಹಳ್ಳಿಂಗೇರಿ ಕಾರ್ಯಕ್ರಮವನ್ನು ನಿರೂಪಿಸಿದರು, ಬಾಲಕೃಷ್ಣ ನೈಮಿಷ ವಂದಿಸಿದರು. ಶಿಬಿರದಲ್ಲಿ ಒಟ್ಟು 331 ಯೂನಿಟ್ ರಕ್ತ ಸಂಗ್ರಹಣೆಯಾಯಿತು.





