“ಗ್ರಾಮೀಣ ಜ್ಞಾನಾಭಿವೃದ್ದಿಗೆ ಹೊಸ ದಾರಿದೀಪ” — ಅಧ್ಯಕ್ಷ ಉದಯ ಕುಮಾರ್ ಗೌಡ





ನೆಲ್ಯಾಡಿ: ಕರ್ನಾಟಕ ಸರ್ಕಾರದ 15ನೇ ಹಣಕಾಸು ಯೋಜನೆ ಹಾಗೂ ಗ್ರಾಮ ಪಂಚಾಯಿತಿ ಸ್ವಂತ ನಿಧಿಯಡಿ ನಿರ್ಮಿಸಲಾದ ಕೌಕ್ರಾಡಿ ಗ್ರಾಮ ಪಂಚಾಯಿತಿಯ ನೂತನ ಅರಿವು ಕೇಂದ್ರ ಫೆ.10ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉದ್ಘಾಟನೆಯಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀಧರ ನೂಜಿನ್ನಾಯ ಅವರ ನೇತೃತ್ವದಲ್ಲಿ ಶಾರದಾ ಪೂಜೆ ನೆರವೇರಿತು. ಬಳಿಕ ಕೌಕ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಗೌಡ ಅವರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸುವ ಮೂಲಕ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಗ್ರಾಮಸ್ಥರಿಗೆ ಜ್ಞಾನ, ಮಾಹಿತಿ ಮತ್ತು ಓದು ಸಂಸ್ಕೃತಿಯನ್ನು ಉತ್ತೇಜಿಸುವುದು ನಮ್ಮ ಪಂಚಾಯಿತಿಯ ಪ್ರಮುಖ ಗುರಿ. ಇದೇ ದೃಷ್ಟಿಯಿಂದ ನಿರ್ಮಿಸಿದ ನೂತನ ಅರಿವು ಕೇಂದ್ರ ಜನರಿಗೆ ಜ್ಞಾನಾರ್ಜನೆಗೆ ಅನುಕೂಲವಾಗುವ ಸುಸಜ್ಜಿತ ವಾತಾವರಣವನ್ನು ಒದಗಿಸುತ್ತದೆ. ನನ್ನ ಅಧಿಕಾರಾವಧಿಯಲ್ಲಿ ಇಂತಹ ಸೌಲಭ್ಯವನ್ನು ಕಟ್ಟಿಕೊಡಲು ಸಾಧ್ಯವಾಗಿರುವುದು ನನಗೆ ಹೆಮ್ಮೆಯ ವಿಷಯ. ಈ ಕಾರ್ಯದಲ್ಲಿ ತೊಡಗಿಕೊಂಡ ಎಲ್ಲಾ ಸದಸ್ಯರು ಹಾಗೂ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು,” ಎಂದರು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಬಾಣಜಾಲು, ಸದಸ್ಯರಾದ ಸುಧಾಕರ, ಭವಾನಿ, ಜನಾರ್ದನ, ಮಹೇಶ್ ಕುಮಾರ್, ಪುಷ್ಪ, ದೇವಕಿ, ಹಾರ್ಪಳ ಶ್ರೀ ಶಾಸ್ತರೇಶ್ವರ ದೇವಸ್ಥಾನದ ಅಧ್ಯಕ್ಷ ಸುಂದರ ಗೌಡ ಅತ್ರಿಜಾಲು, ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರವಿಚಂದ್ರ ಹೊಸವಕ್ಲು, ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯ ರವಿ ಪ್ರಸಾದ್ ಶೆಟ್ಟಿ ಬಲ್ಯ, ಶಿರಾಡಿ ಗ್ರಾಮ ಪಂಚಾಯಿತಿ ಗ್ರಂಥಪಾಲಕಿ ರೇಖಾ ಶಿರಾಡಿ, ಶ್ರೀರಾಮ ಮಾತೃ ಭಜನಾ ಮಂಡಳಿಯ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ, ಕಾಂಟ್ರಾಕ್ಟರ್ ಉಮ್ಮರ್ ಬೈಲಂಗಡಿ, ಸಂಜೀವಿನಿ ಒಕ್ಕೂಟದ ಚಂದ್ರಿಕಾ, ಸ್ವರ್ಣಲತಾ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಲೋಕೇಶ್ ಬಾಣಜಾಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು

ಸನ್ಮಾನ:
ನೂತನ ಅರಿವು ಕೇಂದ್ರ ಕಟ್ಟಡ ನಿರ್ಮಾಣ ಕಾರ್ಯದ ಮುಖ್ಯ ಕಾಂಟ್ರಾಕ್ಟರ್ ವಿನೋದ್ ಹಾಗೂ ಕಾರ್ಯಕ್ಷೇತ್ರದ ಗ್ರಂಥಪಾಲಕಿ ವಿಮಲ, ಹಾಗೂ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಬಾಣಜಾಲು ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.





