ಸುಳ್ಯ: ಎನ್ನೆಂಸಿ ಗ್ಲೋಬಲ್ ರಿಸೈಕ್ಲಿಂಗ್ ಡೇ ಆಚರಣೆ

ಶೇರ್ ಮಾಡಿ

ವಸ್ತುಗಳ ಮರುಬಳಕೆಯ ಮೂಲಕ ತ್ಯಾಜ್ಯದ ನಿವಾರಣೆ ಹಾಗೂ ಸಂಪನ್ಮೂಲದ ಉಳಿಕೆ
                                                                                                                               – ಬಾಲಕೃಷ್ಣ ಬೊಳ್ಳೂರು

ನೇಸರ ಮಾ.18: ವಸ್ತುಗಳ ಬಳಕೆಯಿಂದ ಉಂಟಾಗುವ ತ್ಯಾಜ್ಯಗಳು ಸಮಸ್ಯೆಯಾಗಿ ಪರಿಣಮಿಸುತ್ತವೆ, ಅದರ ಮರುಬಳಕೆಯಿಂದ ತ್ಯಾಜ್ಯದ ನಿವಾರಣೆಯ ಜೊತೆಗೆ ಸಂಪನ್ಮೂಲದ ಉಳಿಕೆಯಾಗುತ್ತದೆ.

ಯಾವುದೇ ವಸ್ತುಗಳ ಬಳಕೆ ಮಾಡುವ ಸಂದರ್ಭದಲ್ಲಿ ಅದರ ತ್ಯಾಜ್ಯವನ್ನು ಮರು ಬಳಕೆ ಮಾಡುವುದನ್ನು ತಿಳಿದಿರಬೇಕು ಎಂದು ಕೆವಿಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಬೊಳ್ಳೂರು ಅಭಿಪ್ರಾಯಪಟ್ಟರು. ಅವರು ಮಾರ್ಚ್ 18 ರಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕಾಲೇಜಿನ‌ ಐಕ್ಯೂಎಸಿ ಹಾಗೂ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಕೆವಿಜಿ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ಹಮ್ಮಿಕೊಂಡ ಗ್ಲೋಬಲ್ ರಿಸೈಕ್ಲಿಂಗ್ ಡೇ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಕೆವಿಜಿ ಮೆಡಿಕಲ್ ಕಾಲೇಜಿನ ಡೀನ್ ನೀಲಾಂಬಿಕೈ ನಟರಾಜನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಮಾತನಾಡಿ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಆ ನಿಟ್ಟಿನಲ್ಲಿ ಮರುಬಳಕೆಯ ವಸ್ತುಗಳನ್ನು ಹೆಚ್ಚು ಬಳಸಬೇಕಾದ ಅಗತ್ಯವಿದೆ ಎಂದರು. ನೆಹರೂ ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರತ್ನ ಸಿಂಚನ, ರಚನಾ ಹಾಗೂ ನಿರೀಕ್ಷಾ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಮಮತಾ ಕೆ ಸ್ವಾಗತಿಸಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರತ್ನಾವತಿ ಡಿ ವಂದಿಸಿದರು. ಕನ್ನಡ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು.

ಗ್ಲೋಬಲ್ ರೀಸೈಕ್ಲಿಂಗ್ ಡೇ ಪ್ರಯುಕ್ತ ಹಮ್ಮಿಕೊಂಡ ಮೋಡೆಲ್ ಸ್ಪರ್ಧೆಯಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಪ್ರಥಮ ಸ್ಥಾನವನ್ಹು, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ದ್ವಿತೀಯ ಸ್ಥಾನವನ್ನು, ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಸುಳ್ಯ, ತೃತೀಯ ಸ್ಥಾನವನ್ನು ಪಡೆದುಕೊಂಡಿತು.

ವೀಕ್ಷಿಸಿ Subscribers ಮಾಡಿ

Leave a Reply

error: Content is protected !!