ನೇಸರ ಮಾ.18: ಭಾರತದ ಸಾಂಪ್ರದಾಯಿಕ ಉತ್ಸವಗಳಲ್ಲಿ ಒಂದಾದ ಹೋಳಿ ಹಬ್ಬವನ್ನು ನೆಲ್ಯಾಡಿಯ ಬೆಥನಿ ಸಪಿಯೆನ್ಶಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತ್ಯಂತ ವಿಜೃಂಭಣೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ವಿದ್ಯಾರ್ಥಿಗಳನ್ನು ಗುಂಪುಗಳಾಗಿ ಪ್ರತ್ಯೇಕಿಸಿ, ಗುಂಪುಗಳಿಗೆ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ಫಾ.ಮೆಲ್ವಿನ್ ಮ್ಯಾಥ್ಯೂ, ಉಪಪ್ರಾಂಶುಪಾಲರಾದ ಫಾ. ಜಿಜನ್ ಅಬ್ರಹಾಂ, ಹೋಳಿ ಹಬ್ಬದ ಪ್ರಾಯೋಜಕರಾದ ಅಖಿಲ್ ಜಾರ್ಜ್, ಶ್ರೀಮತಿ ವಿಧಿಶ ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡರು.
—ಜಾಹೀರಾತು—