600 ವರ್ಷಗಳ ಪ್ರಾಚೀನ ಬಸದಿಯ ಜೀರ್ಣೋದ್ಧಾರ; ಏಲಾಚಾರ್ಯ ಪ್ರಸಂಗಸಾಗರ ಮುನಿಮಹಾರಾಜರ ಉಪಸ್ಥಿತಿಯಲ್ಲಿ ಸಮಾರಂಭ



ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದದಲ್ಲಿ ಸುಮಾರು 600 ವರ್ಷಗಳ ಪುರಾತನ ಇತಿಹಾಸ ಹೊಂದಿರುವ ನಿಡ್ವಾಳ ಭ|1008 ಶ್ರೀಪಾರ್ಶ್ವನಾಥ ಸ್ವಾಮಿಯ ನೂತನ ಬಸದಿಯು ನಿರ್ಮಾಣಗೊಂಡಿದ್ದು, ಪಂಚಕಲ್ಯಾಣ ಮತ್ತು ನೂತನ ಬಿಂಬದ ಪ್ರತಿಷ್ಠಾ ಮಹೋತ್ಸವವು ಆರಂಭವಾಗಿದೆ.
ಈ ಜಿನ ಮಂದಿರವು ಕಳೆದ 100 ವರ್ಷಗಳ ಹಿಂದೆ ಸಂಪೂರ್ಣ ನೆಲಸಮಗೊಂಡು ಅವಶೇಷಗಳಿಂದ ಕೂಡಿ ಅಜೀರ್ಣವಸ್ಥೆಯನ್ನು ತಲುಪಿತ್ತು. ಇದರ ಮೂಲ ಬಿಂಬ ಶ್ರೀಪಾರ್ಶ್ವನಾಥ ಸ್ವಾಮಿಯ ಅಮೃತ ಶಿಲೆಯ ಮೂರ್ತಿಯು ಕಡಬ ತಾಲೂಕಿನ ಕುಳವಳಿಕೆ ಬಸದಿಯಲ್ಲಿದ್ದುದ್ದರಿಂದ, ಪಂಚಕಲ್ಯಾಣ ಮಹೋತ್ಸವ ಹಾಗೂ ಧಾಮ ಸಂಪ್ರೂಕ್ಷಣಾ ಪೂರ್ವಕ ನೂತನ ಬಿಂಬ ಪ್ರತಿಷ್ಠಾ ಮಹೋತ್ಸದ ನಿಮಿತ್ತ ನೂತನ ಬಸದಿಗೆ ಮೂಲಸ್ವಾಮಿ ಮೂರ್ತಿಯನ್ನು ಪೂಜೆವಿಧಿ ವಿಧಾನದ ನೆರವೇರಿಸಿ ಕುಳವಳಿಕೆ ಕುಟುಂಬದವರು ಬೀಳ್ಕೊಟ್ಟರು.
ಮೂಲಸ್ವಾಮಿಯ ವಿಗ್ರಹವನ್ನು ಹಾಗು ಬಸದಿಯ ಸಹಸ್ರಫಣಿ 1008 ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ದೇವಿಯ ನೂತನ ವಿಗ್ರಹವನ್ನು ಕುತ್ಲೂರು ನಿಂದ ಭವ್ಯ ಮೆರವಣಿಗೆ ಮೂಲಕ ತರಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿದಾಗ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬದವರು ದರ್ಶನ ಪಡೆದರು. ನಂತರ ನೂತನ ಮೂರ್ತಿಯನ್ನು ಜಲ ಸ್ತಂಭನ ಮಾಡಲಾಯಿತು. ಈ ಬಸದಿಯ ಪ್ರದೇಶದಲ್ಲಿ ಬಸದಿಗೆ ಸಂಬಂಧಿಸಿದಂತೆ ಹಿಂದೆ ನೂರಾರು ಜೈನ ಕುಟುಂಬಗಳು ಇದ್ದವೆಂದು ಗುರುತಿಸಲಾಗಿದೆ ಆದರೆ ಪ್ರಸ್ತುತ ಕೇವಲ ನಾಲ್ಕು ಕುಟುಂಬಗಳು ಅಸುಪಾಸಿನಲ್ಲಿ ನೆಲಸಿವೆ.
ಈ ಕುಟುಂಬಗಳು ಒಟ್ಟು ಸೇರಿ ಬಸದಿಯನ್ನು ನಿರ್ಮಾಣ ಮಾಡುವ ಸದುದ್ದೇಶದಿಂದ ನಿರ್ಧರಿಸಿ, ಪರಮಪೂಜ್ಯ ಎಲಚಾರ್ಯ ಮುನಿಶ್ರೀ 108 ಶ್ರೀ ಪ್ರಸಂಗ ಸಾಗರ ಮಹಾರಾಜರ ಮಾರ್ಗದರ್ಶನ ಹಾಗೂ ಪವನಾ ಸಾನಿದ್ಯದೊಂದಿಗೆ ಈ ಸೀಮೆಯ ಗುರುಗಳಾದ ಪರಮಾಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಾಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ರವರು ಶ್ರೀ ಜೈನ ಮಠ, ಕಾರ್ಕಳ ರವರ ಮಾರ್ಗದರ್ಶನದೊಂದಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಪರಮಪೂಜ್ಯ ಡಾ. ಡಿ.ವೀರೇಂದ್ರ ಹೆಗ್ಗಡೆ ಯವರ ಗೌರವ ಅಧ್ಯಕ್ಷತೆಯಲ್ಲಿ, ಧರ್ಮಸ್ಥಳ ಡಿ.ಹರ್ಷೇಂದ್ರ ಕುಮಾರ್ ಅವರ ಗೌರವ ಸಲಹೆ ಯೊಂದಿಗೆ ಪೂರ್ಣ ನವಿಕರಣಗೊಳಿಸಲಾಗಿದೆ.
ಇದರ ಅಂಗವಾಗಿ ದಿನಾಂಕ ಫೆ.18 ರಿಂದ ಪೂಜಾ ವಿಧಿ ವಿಧಾನಗಳು ಆರಂಭವಾಗಿದ್ದು ಫೆ.22 ರವರೆಗೆ ಪಂಚಕಲ್ಯಾಣ ಮಹೋತ್ಸವ ಹಾಗೂ ಧಾಮ ಸಂಪ್ರೂಕ್ಷಣಾ ಪೂರ್ವಕ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ. ಈಗಾಗಲೇ ಏಲಾಚಾರ್ಯ ಪ್ರಸಂಗಸಾಗರ ಮುನಿಮಹಾರಾಜರು ಪುರಪ್ರವೇಶ ಮಾಡಿದ್ದು, ಅವರ ಉಪಸ್ಥಿತಿ-ಯಲ್ಲಿ ಸಮಾರಂಭಗಳು ನಡೆಯಲಿದೆ.





