ಕೊಕ್ಕಡ ಅಭಿವೃದ್ಧಿಗೆ 102 ಕೋಟಿ ರೂಪಾಯಿ ಅನುದಾನ; ಪಂಚಾಯತ್‌ನಿಂದ ಶಾಸಕರಿಗೆ ಅಭಿನಂದನೆ

ಶೇರ್ ಮಾಡಿ

ಕೊಕ್ಕಡ: ಕಳೆದ ಐದು ವರ್ಷಗಳಿಂದ ಪಾರದರ್ಶಕ ಆಡಳಿತ ನಡೆಸಿದ ಹಿನ್ನೆಲೆಯಲ್ಲಿ ಮತ್ತು ಗ್ರಾಮದ ಸಮಗ್ರಾಭಿವೃದ್ಧಿಗಾಗಿ ಒಟ್ಟು 102 ಕೋಟಿಯ ಅನುದಾನವನ್ನು ಒದಗಿಸಿದ ಶಾಸಕ ಹರೀಶ್ ಪೂಂಜಾ ಅವರಿಗೆ ಅಮೃತ ಗ್ರಾಮ ಪಂಚಾಯತಿ ಕೊಕ್ಕಡ ವತಿಯಿಂದ ಶಾಸಕರ ಗೃಹಕಚೇರಿಯಲ್ಲಿ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

ಗ್ರಾಮ ಪಂಚಾಯತಿ ಪ್ರತಿನಿಧಿಗಳು ಮುಂದಿನ ದಿನಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳ ವಿಸ್ತರಣೆ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಶಾಸಕರೊಂದಿಗೆ ಚರ್ಚೆ ನಡೆಸಿದ್ದು, ಅದರ ಅನುಷ್ಠಾನಕ್ಕೆ ಶಾಸಕರು ಅಗತ್ಯ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷರು ಪ್ರಭಾಕರ ಗೌಡ, ಗ್ರಾಮ ಪಂಚಾಯತಿ ನಿಕಟಪೂರ್ವ ಅಧ್ಯಕ್ಷರು ಯೋಗೀಶ್ ಆಳಂಬಿಲ, ಸದಸ್ಯರಾದ ವಿಶ್ವನಾಥ್ ಕಕ್ಕುದೊಲಿ, ಜಗದೀಶ್ ಕೆಂಪಕೋಡಿ, ಪವಿತ್ರ, ಕೆ., ಲತಾ, ಮಾಜಿ ಸದಸ್ಯೆ ಲಕ್ಷ್ಮೀ ಅಡೈ, ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಪ್ರಶಾಂತ್ ಪೂವಾಜೆ, ಎಸ್ ಟಿ ಮೋರ್ಚಾ ಮಂಡಲ ಕಾರ್ಯದರ್ಶಿ ವಿಠಲ್ ಕುರ್ಲೆ, ಬೂತ್ ಅಧ್ಯಕ್ಷ ಕಿರಣ್ ಬಾಲ್ತಿಮಾರ್, ಕಾರ್ಯದರ್ಶಿ ರವಿಚಂದ್ರ ಪೊಡಿಕೆತ್ತೊರು ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

error: Content is protected !!