


ಕೊಕ್ಕಡ: ಅಡೈ ಪ್ರದೇಶದ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿರುವ ಶಿವಶಕ್ತಿ ಭಜನಾ ಮಂದಿರದ ಪುನರ್ ನಿರ್ಮಾಣ ಕಾರ್ಯಕ್ಕೆ ಮಹತ್ವದ ಬಲ ಸಿಕ್ಕಿದೆ. ಶಾಸಕ ಹರೀಶ್ ಪೂಂಜಾ ಅವರು ಭಜನಾ ಮಂದಿರದ ಅಭಿವೃದ್ಧಿಗಾಗಿ ರೂ.50,000 ಸಹಾಯಧನವನ್ನು ಅಧಿಕೃತವಾಗಿ ವಿತರಣೆ ಮಾಡಿದರು.
ಬಿಜೆಪಿ 236ನೇ ಬೂತ್ ಅಧ್ಯಕ್ಷ ಕಿರಣ್ ಬಾಳ್ತಿಮಾರ್ ಹಾಗೂ ಕುಶಾಲಪ್ಪ ಗೌಡ ಪೂವಾಜೆ ಭಜನಾ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳಿಗೆ ಸಹಾಯಧನ ಹಸ್ತಾಂತರಿಸಿ ಪುನರ್ ನಿರ್ಮಾಣಕ್ಕೆ ಆರಂಭಿಕ ಉತ್ತೇಜನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಬಿಜೆಪಿ ಮಹಾಶಕ್ತಿ ಕೇಂದ್ರ ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಅಲಂಬಿಲ, ಬೆಳ್ತಂಗಡಿ ಮಂಡಲ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯದರ್ಶಿ ವಿಠಲ್ ಕುರ್ಲೆ, ಕೊಕ್ಕಡ ಶಕ್ತಿ ಕೇಂದ್ರ ಪ್ರಮುಖ್ ಪ್ರಶಾಂತ ಪೂವಾಜೆ, ಕೊಕ್ಕಡ ಕೃಷಿ ಪತ್ತಿನ ಸಹಕಾರಿ ಸಂಘ ನಿರ್ದೇಶಕ ಶ್ರೀನಾಥ್ ಬಡೆಕೈಲು, ಕೊಕ್ಕಡ ಗ್ರಾ.ಪಂ.ನಿಕಟಪೂರ್ವ ಉಪಾಧ್ಯಕ್ಷರ ಪ್ರಭಾಕರ ಮಲ್ಲಿಗೆಮಜಲು, ಕೊಕ್ಕಡ ಗ್ರಾ.ಪಂ.ನಿಕಟಪೂರ್ವ ಸದಸ್ಯ ಜಗದೀಶ್ ಪೂಜಾರಿ ಕೆಂಪಕೋಡಿ, ಕೊಕ್ಕಡ-ಅಡೈ ಶಿವಶಕ್ತಿ ಭಜನಾ ಮಂದಿರ ಅದ್ಯಕ್ಷ ರವಿಚಂದ್ರ ಪೊಡಿಕೆತ್ತೂರು, ಕಾರ್ಯದರ್ಶಿ ಆನಂದ ಅಡ್ಡೈ, ಶಿವಶಕ್ತಿ ಭಜನಾ ಮಂಡಳಿಯ ಲಕ್ಷ್ಮೀ ಅಡೈ, ಬಬಿತಾ ಕೊಲ್ಲಾಜೆ, ಧರ್ಮಸ್ಥಳ ಸಂಘ ಸೇವಾನಿರತೆ ಕುಸುಮ ಅಡೈ, ಮಹೇಂದ್ರ, ಶೀನ ಅಡೈ ಹಾಗೂ ಸ್ಥಳೀಯ ಭಕ್ತರು ಉಪಸ್ಥಿತರಿದ್ದರು.





