ಜನಮಂಗಳ ಯೋಜನೆ: ಅಸ್ವಸ್ಥನಿಗೆ ಕಮಾಂಡ್ ವೀಲ್‌ಚೇರ್ ಹಸ್ತಾಂತರ

ಶೇರ್ ಮಾಡಿ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಕಡಬ ತಾಲ್ಲೂಕಿನ ನೆಲ್ಯಾಡಿ ವಲಯದ ಕೌಕ್ರಾಡಿ ಕಾರ್ಯಕ್ಷೇತ್ರದಲ್ಲಿ ದೊಂತಿಲ ನಿವಾಸಿ ಈಶ್ವರ ಶೆಟ್ಟಿಯವರು ಕಳೆದ ಕೆಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದು, ನಡೆದಾಡಲು ಅಸಾಧ್ಯವಾಗಿರುವ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ, ಯೋಜನೆಯ ಜನಮಂಗಳ ಕಾರ್ಯಕ್ರಮದಡಿ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಒದಗಿಸಲ್ಪಟ್ಟ ಕಮಾಂಡ್ ವೀಲ್‌ಚೇರ್ ಅನ್ನು ಶುಕ್ರವಾರ ಅವರ ಮನೆಗೆ ಭೇಟಿ ನೀಡಿ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕ ಆನಂದ ಡಿ.ಬಿ, ಕೌಕ್ರಾಡಿ ಕಾರ್ಯಕ್ಷೇತ್ರದ ಅಧ್ಯಕ್ಷ ಬಾಲಕೃಷ್ಣ ಗೌಡ, ಸೇವಾಪ್ರತಿನಿಧಿ ನಮಿತಾ ಎಸ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮನೆಯವರ ಪರವಾಗಿ ಈಶ್ವರ ಶೆಟ್ಟಿಯವರ ಪುತ್ರ ಮಹಾಬಲ ಶೆಟ್ಟಿ ಕೃತಜ್ಞತೆ ವ್ಯಕ್ತಪಡಿಸಿದರು.

Leave a Reply

error: Content is protected !!