ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಪೂರ್ವಭಾವಿ ಸಭೆ

ಶೇರ್ ಮಾಡಿ
ರಾ.ಸೆ.ಯೋಜನೆ ವಾರ್ಷಿಕ ಶಿಬಿರಕ್ಕೆ ಪೂರ್ವಭಾವಿ ಸಭೆ

ನೆಲ್ಯಾಡಿ: ನೆಲ್ಯಾಡಿ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಪೂರ್ವಭಾವಿ ಸಭೆಯು ಹಳ್ಳಿಂಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನವಾಸ್ ಎಂ.ಎಸ್ ಅವರು ವಹಿಸಿದ್ದರು.

ಒಂದು ವಾರದ ಕಾಲ ಹಳ್ಳಿಂಗೇರಿ ಶಾಲೆಯಲ್ಲಿ ನಡೆಯಲಿರುವ ವಾರ್ಷಿಕ ಶಿಬಿರದ ಪೂರ್ವ ತಯಾರಿ ಹಾಗೂ ಶಿಬಿರದ ಮಹತ್ವದ ಕುರಿತು ಶಿಬಿರದ ಯೋಜನಾಧಿಕಾರಿ ಉಪನ್ಯಾಸಕಿ ಶೃತಿ ಅವರು ವಿವರಿಸಿದರು.

ಸಭೆಯಲ್ಲಿ ವಾರ್ಷಿಕ ಶಿಬಿರದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಉಮ್ಮರ್ ಬೈಲಂಗಡಿ ಅವರನ್ನು ಆಯ್ಕೆ ಮಾಡಲಾಯಿತು.

ವೇದಿಕೆಯಲ್ಲಿ ಶಾಲಾ ಮುಖ್ಯಶಿಕ್ಷಕ ಶ್ರೀಧರ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಹೇಮಾವತಿ, ಉಪನ್ಯಾಸಕಿ ವೆರೋನಿಕಾ ಪ್ರಭಾ, ಡಾ. ಸೀತಾರಾಮ ಹಾಗೂ ಡಾ. ಧರ್ಮರಾಯ ಶಾಲೆಯ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಶ್ರೀಧರ್ ಸ್ವಾಗತಿಸಿದರು. ಶೃತಿ ವಂದಿಸಿದರು.

Leave a Reply

error: Content is protected !!