


ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಕಡಬ ತಾಲೂಕು ನೆಲ್ಯಾಡಿ ವಲಯ ಪಡುಬೆಟ್ಟು ಕಾರ್ಯಕ್ಷೇತ್ರದ ರಾಮನಗರದ ನಿವಾಸಿ ಸುಂದರ ಶೆಟ್ಟಿ ಅವರು ಆನಾರೋಗ್ಯದಿಂದ ಬಳಲುತ್ತಿದ್ದು ನಡೆದಾಡಲು ಅಸಾಧ್ಯವಾಗಿರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಳ ಕಾರ್ಯಕ್ರಮದಡಿ ವೀಲ್‌ಚೇರ್ ನೀಡಲಾಯಿತು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ಆನಂದ ಡಿ.ಬಿ, ಪಡುಬೆಟ್ಟು, ಕಾರ್ಯಕ್ಷೇತ್ರದ ಅಧ್ಯಕ್ಷ ಜೋನ್ ಮೊಂತೆರೊ, ಸೇವಾ ಪ್ರತಿನಿಧಿ ಮೋಹಿನಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.





