


ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಎನ್ಎಸ್ಎಸ್ ಸ್ವಯಂಸೇವಕರು ಕುಮಾರಧಾರ ಸ್ನಾನಘಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ರವಿವಾರ ಮಾಡಿರುವರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಕುಮಾರಧಾರ ಸ್ನಾನಘಟ್ಟದ ಬಳಿ ತೀರ್ಥಸ್ನಾನವನ್ನು ಮಾಡುತ್ತಿದ್ದು ಅದರಲ್ಲಿ ಹಲವು ಮಂದಿ ತಮ್ಮ ಬಟ್ಟೆ ಬರೆ, ಸೋಪು, ಶ್ಯಾಂಪು, ಪೇಸ್ಟ್, ಬ್ರಷ್, ಪ್ಲಾಸ್ಟಿಕ್ ಚೀಲ ಇತ್ಯಾದಿಗಳನ್ನು ಸ್ನಾನಘಟ್ಟದ ಮೆಟ್ಟಿಲುಗಳಲ್ಲಿ ಹಾಗೂ ಹಳೆ ಬಟ್ಟೆಗಳನ್ನ ನೀರಿನಲ್ಲಿ ಬಿಟ್ಟು ಹೋಗಿರುವುದು ಇಡೀ ಪರಿಸರವನ್ನು ಹಾಳುಗಿಡವಿತ್ತು. ಇದನ್ನು ಮನಗಂಡ ಕೆ ಎಸ್ ಎಸ್ ಕಾಲೇಜಿನ ಎನ್ಎಸ್ಎಸ್ ಘಟಕದ ಸುಮಾರು 50-60 ಸ್ವಯಂಸೇವಕರು ರವಿವಾರ ನೀರಿನಿಂದ ಬಟ್ಟೆ ಬರೆಗಳನ್ನು ಮೇಲೆತ್ತಿ ಹಾಕಿ ಹಾಗೂ ದಡದಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅಕ್ಕಪಕ್ಕದಲ್ಲಿದ್ದ ಕಸ ಕಡ್ಡಿಗಳು ಹಾಗೂ ಪ್ಲಾಸ್ಟಿಕ್ ಚೀಲಗಳು ಇತ್ಯಾದಿಗಳನ್ನು ತೆರವುಗೊಳಿಸಿ, ಇಡೀ ಪರಿಸರವನ್ನು ಸುಚಿಗೊಳಿಸಿದರು.
ಕೆ ಎಸ್ ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಡಿ., ಎನ್ ಎಸ್ ಎಸ್ ಸಂಯೋಜನಾಧಿಕಾರಿಗಳಾದ ಆರತಿ ಹಾಗೂ ಸುಮಿತ್ರ ಮಾರ್ಗದರ್ಶನ ನೀಡಿದರು.





