ಶಿಶಿಲ: ಉಮ್ಮಂತಿಮಾರ್‌ನಲ್ಲಿ ಕಿಂಡಿ ಅಣೆಕಟ್ಟು, ಒಟ್ಲದಲ್ಲಿ ಸೇತುವೆ ನಿರ್ಮಾಣಕ್ಕೆ ಶಾಸಕರಿಂದ ಶಿಲಾನ್ಯಾಸ

ಶೇರ್ ಮಾಡಿ
ಶಿಶಿಲ–ಉಮ್ಮಂತಿಮಾರ್‌ನಲ್ಲಿ ಕಿಂಡಿ ಅಣೆಕಟ್ಟು, ಒಟ್ಲದಲ್ಲಿ ಸೇತುವೆ ನಿರ್ಮಾಣಕ್ಕೆ ಶಾಸಕರಿಂದ ಶಿಲಾನ್ಯಾಸ

ಕೊಕ್ಕಡ: ಶಿಶಿಲ ಗ್ರಾಮದ ಉಮ್ಮಂತಿಮಾರ್ ನಲ್ಲಿ ರೂ.2.50 ಕೋಟಿ ವೆಚ್ಚದ ಕಿಂಡಿ ಅಣೆಕಟ್ಟು ನಿರ್ಮಾಣ ಹಾಗೂ ಒಟ್ಲ ಪ್ರದೇಶದಲ್ಲಿ ರೂ.40 ಲಕ್ಷ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಸೋಮವಾರ ದಂದು ಶಿಲಾನ್ಯಾಸವು ಕಾರ್ಯಕ್ರಮ ನೆರವೇರಿತು.

ಶಾಸಕ ಹರೀಶ್ ಪೂಂಜ ಅವರು ಶಿಲಾನ್ಯಾಸ ನೆರವೇರಿಸಿದರು. ಸ್ಥಳೀಯ ಜನರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಈ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಿಂಡಿ ಅಣೆಕಟ್ಟು ನಿರ್ಮಾಣದಿಂದ ನೀರಿನ ಸಂರಕ್ಷಣೆ ಹಾಗೂ ಕೃಷಿ ಚಟುವಟಿಕೆಗಳಿಗೆ ನೆರವಾಗಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.

ಒಟ್ಲ ಪ್ರದೇಶದ ಸೇತುವೆ ನಿರ್ಮಾಣದಿಂದ ಗ್ರಾಮಾಂತರ ಸಂಪರ್ಕ ವ್ಯವಸ್ಥೆ ಸುಧಾರಣೆ ಕಾಣಲಿದೆ ಶಿಬಾಜೆ ಗ್ರಾಮಕ್ಕೂ ಸಂಪರ್ಕಕ್ಕೆ ಅನುಕೂಲವಾಗಲಿದೆ. ಅದಲ್ಲದೆ ಶಿಶಿಲ ದೇವಸ್ಥಾನಕ್ಕೆ ಮತ್ತು ದೇವಸ ಭಾಗಕ್ಕೆ ಈ ಸೇತುವೆ ಮೂಲಕ ಸಂಪರ್ಕ ಕಲ್ಪಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಸುಧೀನ್ ಡಿ, ಸಂದೀಪ್ ಅಮ್ಮುಡಂಗೆ, ಮಾಜಿ ಸದಸ್ಯರು, ಸ್ಥಳೀಯ ಮುಖಂಡರಾದ, ಕೊರಗಪ್ಪ ಗೌಡ, ಕರುಣಾಕರ ಶಿಶಿಲ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಚೇತನ ಚಂದ್ರಶೇಖರ, ಆನಂದ ಪೂಜಾರಿ, ರಾಧಾಕೃಷ್ಣ ಗುತ್ತು, ಸುಬ್ರಾಯ ಗೌಡ, ಕೆ ಜಿ ಗೋಖಲೆ, ಕುಶಾಲಪ್ಪ ಗೌಡ, ಗೋಪು ಗೋಖಲೆ, ರಮೇಶ್ ಒಟ್ಲ, ಶೀನಪ್ಪ, ಚೆನ್ನಪ್ಪ ಮಲೆಕುಡಿಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

error: Content is protected !!