ರಾಜ್ಯ ಮಟ್ಟದ ರೋಪ್‌ಸ್ಕಿಪ್ಪಿಂಗ್ ಸ್ಪರ್ಧೆಯಲ್ಲಿ ಕಾಂಚನ ಪ್ರೌಢಶಾಲೆಗೆ 11 ಚಿನ್ನ, 3 ಬೆಳ್ಳಿ ಪದಕ

ಶೇರ್ ಮಾಡಿ
ರೋಪ್‌ಸ್ಕಿಪ್ಪಿಂಗ್ ರಾಜ್ಯ ಮಟ್ಟದಲ್ಲಿ ಕಾಂಚನ ಶಾಲೆಗೆ 11 ಚಿನ್ನ, 3 ಬೆಳ್ಳಿ

ನೆಲ್ಯಾಡಿ: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಮತ್ತು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ಫೆ.28ರಿಂದ ಮಾ.2ರವರೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕೆಪಿಎಸ್ ಸಾರಕ್ಕಿಯಲ್ಲಿ ನಡೆದ ರಾಜ್ಯ ಮಟ್ಟದ ರೋಪ್‌ಸ್ಕಿಪ್ಪಿಂಗ್ / ಜಂಪ್‌ರೋಪ್ ಚಾಂಪಿಯನ್‌ ಶಿಪ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಪದಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

14ರ ವಯೋಮಾನದ ಬಾಲಕರ ಸಿಂಗಲ್ ಫ್ರೀ ಸ್ಟೈಲ್ ನಲ್ಲಿ, ಡಬಲ್ ಡಚ್ ಫ್ರೀ ಸ್ಟೈಲ್ ನಲ್ಲಿ ಪೇರ್ ಫ್ರೀ ಸ್ಟೈಲ್ ನಲ್ಲಿ ಪ್ರಥಮ ಸ್ಥಾನ. 14ರ ವಯೋಮಾನದ ಬಾಲಕಿಯರ ಪೇರ್ ಫ್ರೀ ಸ್ಟೈಲ್ ನಲ್ಲಿ, ಡಬಲ್ ಡಚ್ ಫ್ರೀ ಸ್ಟೈಲ್ ನಲ್ಲಿ ಪ್ರಥಮ ಸ್ಥಾನ. 17ರ ವಯೋಮಾನದ ಬಾಲಕರ ಡಬಲ್ ಅಂಡರ್ ನಲ್ಲಿ, ಪೇರ್ ಫ್ರೀ ಸ್ಟೈಲ್ ನಲ್ಲಿ, ಸ್ಪೀಡ್ ಸ್ಪ್ರಿಂಗ್ ಡಬಲ್ ಅಂಡರ್ ನಲ್ಲಿ ಪ್ರಥಮ ಸ್ಥಾನ, ಡಬಲ್ ಡಚ್ ಸಿಂಗಲ್ ಫ್ರೀ ಸ್ಟೈಲ್ ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡು 14ರ ವಯೋಮಾನದ ವಿಭಾಗದಲ್ಲಿ 8 ಚಿನ್ನದ ಪದಕಗಳೊಂದಿಗೆ 6 ವಿದ್ಯಾರ್ಥಿಗಳು, ಹಾಗೂ 17ರ ವಯೋಮಾನದ ವಿಭಾಗದಲ್ಲಿ 3 ಚಿನ್ನ ಮತ್ತು 3 ಬೆಳ್ಳಿಯ ಪದಕಗಳೊಂದಿಗೆ 5 ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇವರಿಗೆ ಮುಖ್ಯಶಿಕ್ಷಕ ರಮೇಶ ಮಯ್ಯ ಅವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಹೇಮೋಧರ್‌ ಅವರು ತರಬೇತಿಯನ್ನು ನೀಡಿರುತ್ತಾರೆ.

Leave a Reply

error: Content is protected !!