





ನೆಲ್ಯಾಡಿ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ರಾಷ್ಟ್ರೀಯ ಸಮ್ಮೇಳನದಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜಿಯನ್ ಮಹತ್ವದ ಸಾಧನೆ ಮಾಡಿದ್ದು, ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ವಿಭಾಗದಲ್ಲಿ ರನ್ನರ್ ಅಪ್ ಪ್ರಶಸ್ತಿ ಹಾಗೂ ದೇಶದ ಅತ್ಯುತ್ತಮ ಲೀಜಿಯನ್‌ಗಳಲ್ಲಿ ಟೋಪ್ ಫೈವ್ ಲೀಜಿಯನ್ ಆಗಿ ಆಯ್ಕೆಯಾಗುವ ಮೂಲಕ ದ್ವಿಗುಣ ಗೌರವಕ್ಕೆ ಪಾತ್ರವಾಗಿದೆ.
2025–26ನೇ ಸಾಲಿನಲ್ಲಿ ನೆಲ್ಯಾಡಿ ಸೀನಿಯರ್ ಚೇಂಬರ್ ಕೈಗೊಂಡ ವಿವಿಧ ಸಾಮಾಜಿಕ ಚಟುವಟಿಕೆಗಳು, ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳು, ಸಮುದಾಯ ಅಭಿವೃದ್ಧಿ ಕಾರ್ಯಗಳು ಹಾಗೂ ವಿವಿಧ ತರಬೇತಿ ಕಾರ್ಯಕ್ರಮಗಳ ಪರಿಣಾಮಕಾರಿಯಾದ ಅನುಷ್ಠಾನವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸ್ಥಳೀಯ ಮಟ್ಟದಲ್ಲಿ ಜನರೊಂದಿಗೆ ಉತ್ತಮ ಸಂಪರ್ಕ ಬೆಳೆಸಿಕೊಂಡಿರುವುದಕ್ಕೆ ಸಂಘಟನೆಯ ಕಾರ್ಯಪದ್ಧತಿಗೆ ರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರುದಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ಸೀನಿಯರ್ ಪಿಪಿಎಫ್ ಎಂ.ಆರ್.ಜಯೇಶ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಹಾಗೂ ನಿಯೋಜಿತ ರಾಷ್ಟ್ರೀಯ ಅಧ್ಯಕ್ಷ ಸೀನಿಯರ್ ಎಸ್.ಎಫ್.ಎಂ. ವಾಸುದೇವನ್, ಏರಿಯಾ ಎಫ್‌ನ ರಾಷ್ಟ್ರೀಯ ಉಪಾಧ್ಯಕ್ಷ ಸೀನಿಯರ್ ಪಿಪಿಎಫ್ ಸಿದ್ದಗಂಗಯ್ಯ ಸೇರಿದಂತೆ ಹಲವು ರಾಷ್ಟ್ರೀಯ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗೌರವ ಸ್ವೀಕರಿಸುವ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜಿಯನ್‌ನ ಪೂರ್ವಾಧ್ಯಕ್ಷರು ಹಾಗೂ ರಾಷ್ಟ್ರೀಯ ಸಂಯೋಜಕ ಸೀನಿಯರ್ ಪಿಪಿಪಿಎಫ್ ಡಾ.ಸದಾನಂದ ಕುಂದರ್, ಅಧ್ಯಕ್ಷ ಸೀನಿಯರ್ ಎಸ್.ಎಫ್.ಎಂ. ಪ್ರಕಾಶ್ ಕೆ.ವೈ., ಕಾರ್ಯದರ್ಶಿ ಸೀನಿಯರ್ ಪಿಪಿಎಫ್ ಉಲಹನ್ನಾನ್ ಪಿ.ಎಂ., ಕೋಶಾಧಿಕಾರಿ ಸೀನಿಯರ್ ಮೋಹನ್ ಕುಮಾರ್ ಡಿ., ಸೀನಿಯರೆಟ್ ಎಲ್ಸಿ ಪಿ.ಪಿ ಹಾಗೂ ಕೃಷ್ಣಕಮಲ್ ರೆಸಾರ್ಟ್ ಬೆಂಗಳೂರು ಇದರ ಮಾಲಕರಾದ ಜೈಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





