ಖ್ಯಾತ ಯಕ್ಷಗಾನ ಕಲಾವಿದ ಅಂತರ ದಿನೇಶ್ ಭಟ್ ಮೆಹೆಂದಳೆ ಇನ್ನಿಲ್ಲ

ಶೇರ್ ಮಾಡಿ
ಖ್ಯಾತ ಯಕ್ಷಗಾನ ಕಲಾವಿದ ಅಂತರ ದಿನೇಶ್ ಭಟ್ ಮೆಹೆಂದಳೆ ಇನ್ನಿಲ್ಲ

ಕೊಕ್ಕಡ: ಅರಸಿನಮಕ್ಕಿ-ಹತ್ಯಡ್ಕ ಗ್ರಾಮದ ಹೊಸ್ತೋಟ ನಿವಾಸಿ ಅಂತರ ದಿನೇಶ್ ಭಟ್(77) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರದಂದು ಬೆಳಿಗ್ಗೆ ಗಂಟೆ 6.30ರ ಸುಮಾರಿಗೆ ನಿಧನರಾದರು.

ಇವರು ರಾಷ್ಟೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂ ಸೇವಕರಾಗಿ, ಹೆಸರಾಂತ ಯಕ್ಷಗಾನ ಸ್ತ್ರೀ ವೇಷದ ಕಲಾವಿದರೂ ಆಗಿದ್ದರು. ಬಿಜೆಪಿಯ ಗ್ರಾಮ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಮಗ ಮತ್ತು ಐವರು ಪುತ್ರಿಯರನ್ನು, ಅಳಿಯಂದಿರು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

Leave a Reply

error: Content is protected !!