ಪಟ್ರಮೆಯಲ್ಲಿ ಇಫ್ತಾರ್ ಕೂಟ ಕಾರ್ಯಕ್ರಮ

ಶೇರ್ ಮಾಡಿ
ಪಟ್ರಮೆಯಲ್ಲಿ ಇಫ್ತಾರ್ ಕೂಟ ಕಾರ್ಯಕ್ರಮ

ಕೊಕ್ಕಡ: ಮಂಗಳೂರಿನ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷ ಗ್ರಾಮೀಣ ಪ್ರದೇಶದಲ್ಲಿ ನಡೆಯುವಂತೆ ಈ ಬಾರಿಯ ಇಫ್ತಾರ್ ಕಾರ್ಯಕ್ರಮ ಬೆಳ್ತಂಗಡಿ ತಾಲೂಕಿನ ಪಟ್ರಮೆ ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ನಡೆಯಿತು.

ಮಾಡನ್ನೂರು ಜುಮ್ಮಾ ಮಸೀದಿಯ ಇಮಾಮ್ ಎಸ್.ಬಿ. ಮೊಹಮ್ಮದ್ ದಾರಿಮಿ ರಮ್ಜಾನ್ ಸಂದೇಶ ನೀಡಿ, ಪ್ರತಿವರ್ಷ ಕುಗ್ರಾಮಗಳನ್ನು ಹುಡುಕಿಕೊಂಡು ಹೋಗಿ ಇಫ್ತಾರ್ ಕಾರ್ಯಕ್ರಮ ಸಹಿತ ಸವಲತ್ತು ವಿತರಣೆ ನಡೆಸುವ ಕಾರ್ಯಕ್ರಮ ಶ್ಲಾಘನೀಯ ಎಂದರು. ಇಂತಹ ಗ್ರಾಮೀಣ ಪ್ರದೇಶದ ಜನರು ಶ್ರೀಮಂತಿಕೆ ಬಂದಾಗ ಊರು ಬಿಟ್ಟು ನಗರ ಪ್ರದೇಶಕ್ಕೆ ಹೋಗದೆ, ಗ್ರಾಮಗಳಿಗೆ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಬೇಕು. ಮಾದಕ ವ್ಯಸನ, ಕಳ್ಳತನ ಮುಂತಾದ ಕೆಡುಕುಗಳು ಬಾರದಂತೆ ಜಾಗ್ರತೆ ವಹಿಸಬೇಕು. ಊರಿನ ಸೌಹಾರ್ದತೆ ಉಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಮಸೀದಿಯ ಖತೀಬ್ ತುಫೈಲ್ ಅಝ್‌ಹರಿ ದುಆ ನೆರವೇರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಂಫ್ರೆಂಡ್ಸ್ ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ಹನೀಫ್ ಗೋಳ್ತಮಜಲು ಮಾತನಾಡಿದರು. ಜಮಾತಿನ ಎಲ್ಲ ಮನೆಗಳಿಗೆ ರೇಷನ್ ಕಿಟ್ ಸಹಿತ ಅಗತ್ಯ ವಸ್ತಗಳನ್ನು ವಿತರಿಸಲಾಯಿತು.

ಹಸನಿಯ ಸಂಸ್ಥೆಯ ಅಧ್ಯಕ್ಷ ಶಾಫಿ ಸಖಾಫಿ, ಪ್ರಾಧ್ಯಾಪಕ ಅಬ್ದುಲ್ ರಝಾಕ್ ಅನಂತಾಡಿ, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಮಸೀದಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಹನೀಫ್, ಕಾರ್ಯದರ್ಶಿ ಅನ್ಸಾಫ್, ಕೋಶಾಕಾರಿ ನಾಸಿರ್, ಎಂಫ್ರೆಂಡ್ಸ್ ಸ್ಥಾಪಕ ರಶೀದ್ ವಿಟ್ಲ, ಕೋಶಾಕಾರಿ ಝುಬೇರ್ ಬುಳೆರಿಕಟ್ಟೆ, ಉಪಾಧ್ಯಕ್ಷರಾದ ಅಬೂಬಕರ್ ಪುತ್ತು, ಟ್ರಸ್ಟಿಗಳಾದ ಅನ್ವರ್ ಹುಸೇನ್, ಕಲಂದರ್ ಪರ್ತಿಪಾಡಿ, ಹಂಝ ಬಸ್ತಿಕೋಡಿ, ಹಾರಿಸ್ ಕಾನತಡ್ಕ, ಹನೀಫ್ ಟಿಎಚ್‌ಎಂಎ, ಇಸ್ಮಾಯಿಲ್ ಕೋಲ್ಪೆ, ಟಿ.ಕೆ.ಮೊಹಮ್ಮದ್, ಅನ್ಸಾರ್ ಬೆಳ್ಳಾರೆ, ಉಬೇದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

ಎಂಫ್ರೆಂಡ್ಸ್ ಕಾರ್ಯಾಧ್ಯಕ್ಷ ಸುಜಾಹ್ ಮೊಹಮ್ಮದ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply

error: Content is protected !!