ಜಿಲ್ಲಾ ಮಟ್ಟದ ಭಾರ ಎತ್ತುವ ಸ್ಪರ್ಧೆಯಲ್ಲಿ ಸುಳ್ಯದ ಸ್ಪರ್ಧಿಗಳಿಗೆ ಪದಕ

ಶೇರ್ ಮಾಡಿ
ವಿನಾಯಕ ಎಂ ಹೆಚ್ , ದ್ವಿತೀಯ ಬಿ ಎ
ತೇಜಸ್ ಪಿ ಕೆ, ದ್ವಿತೀಯ ಬಿಬಿಎ

ದರ್ಶನ್ ಕೆ ಎನ್, ಪ್ರಥಮ ಬಿಕಾಂ
ಚಂದನ್ ಸಿ ಪಿ, ಪ್ರಥಮ ಪಿಯುಸಿ

ರಕ್ಷಾ ಕೆ ಆರ್, ಅಂತಿಮ ಬಿಕಾಂ

ನೇಸರ ಮಾ.19: ಮಂಗಳೂರು ಮಹಾನಗರ ಪಾಲಿಕೆ ಮತ್ತು ದಕ್ಷಿಣ ಕನ್ನಡ ವೈಟ್ ಲಿಫ್ಟರ್ಸ್ ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ಮಾ.12 ಮತ್ತು 13ರಂದು ಮಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಜಿಲ್ಲಾ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಿನಾಯಕ ಎಂ ಎಚ್, ದ್ವಿತೀಯ ಬಿ ಎ, 73 ಕೆಜಿ ವಿಭಾಗದಲ್ಲಿ ಕಂಚಿನ‌ ಪದಕ, ತೇಜಸ್ ಪಿ ಕೆ, ದ್ವಿತೀಯ ಬಿಬಿಎ 81 ಕೆಜಿ ವಿಭಾಗದಲ್ಲಿ ಕಂಚಿನ ಪದಕ, ದರ್ಶನ್ ಕೆ ಎನ್, ಪ್ರಥಮ ಬಿಕಾಂ 89 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ, ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಚಂದನ್ ಸಿ ಪಿ, ಪ್ರಥಮ ಪಿಯುಸಿ 102 ಕೆಜಿ ವಿಭಾಗದಲ್ಲಿ ಕಂಚಿನ‌ ಪದಕ ಹಾಗೂ ಶ್ರೀ ಶಾರದಾ ಮಹಿಳಾ ಪದವಿ ಕಾಲೇಜಿನ ರಕ್ಷಾ ಕೆ ಆರ್, ಅಂತಿಮ ಬಿ ಕಾಂ, 55 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಜಯಿಸಿರುತ್ತಾರೆ.
ಇವರೆಲ್ಲರಿಗೂ ಮಾಜಿ ರಾಷ್ಟ್ರೀಯ ಚಾಂಪಿಯನ್, ವೈಟ್ ಲಿಫ್ಟರ್ ರಮೇಶ್ ಎ ಹಾಗೂ ಲೆಫ್ಟಿನೆಂಟ್ ಸೀತಾರಾಮ ಎಂ ಡಿ, ದೈಹಿಕ ಶಿಕ್ಷಣ ನಿರ್ದೇಶಕರು ಎನ್ನೆಂಸಿ, ಸುಳ್ಯ ಇವರು ತರಬೇತಿ ಹಾಗೂ ಮಾರ್ಗದರ್ಶನ ನೀಡಿರುತ್ತಾರೆ.

ಉಚಿತ ತರಬೇತಿ :
ಕ್ರೀಡಾ ಮತ್ತು ಕಲಾ ಸಂಘ ಸುಳ್ಯ ಮತ್ತು ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇವರ ಜಂಟಿ ಆಶ್ರಯದಲ್ಲಿ ಭಾರ ಎತ್ತುವ ಸ್ಪರ್ಧಿಗಳಿಗಾಗಿ ಉಚಿತ ತರಬೇತಿ ನೀಡಲಾಗುತ್ತಿದ್ದು, ಆಸಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು ಯಾವುದೇ ಶಾಲಾ ಕಾಲೇಜಿನವರು ಈ ಕೆಳಗಿನ ಮೊಬೈಲ್ ಸಂಖ್ಯೆ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿರುತ್ತಾರೆ.
9449386970
9480207621

ವೀಕ್ಷಿಸಿ Subscribers ಮಾಡಿ

 

—ಜಾಹೀರಾತು—

Leave a Reply

error: Content is protected !!