





ಸವಣೂರು: ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವದ ಅಂಗವಾಗಿ ಸವಣೂರು ಗ್ರಾಮ ಸಮಿತಿ ವತಿಯಿಂದ ಸಾಮೂಹಿಕ ಶ್ರೀರಾಮ ತಾರಕ ಮಂತ್ರ ಜಪ ಕಾರ್ಯಕ್ರಮ ಭಾನುವಾರ ರಂದು ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕ ಗೌರಿ ಸದನ ಸಭಾಂಗಣದಲ್ಲಿ ನೆರವೇರಿತು.
ಸವಣೂರು, ಪುಣ್ಚಪ್ಪಾಡಿ ಹಾಗೂ ಪಾಲ್ತಾಡಿ ಗ್ರಾಮಗಳ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀರಾಮ ತಾರಕ ಮಂತ್ರದ ದೀಕ್ಷೆ ಪಡೆದ ಭಕ್ತರು ಏಕಕಾಲದಲ್ಲಿ ತಲಾ 1008 ಬಾರಿ ಜಪ ಮಾಡುವ ಮೂಲಕ ಒಟ್ಟು 42,336 ಮಂತ್ರ ಜಪಗಳನ್ನು ನೆರವೇರಿಸಿದರು. ಭಕ್ತರ ಏಕಾಗ್ರತೆ, ಶ್ರದ್ಧೆ ಹಾಗೂ ಭಕ್ತಿಭಾವ ಕಾರ್ಯಕ್ರಮದ ವೈಶಿಷ್ಟ್ಯವಾಗಿತ್ತು.
ಕಾರ್ಯಕ್ರಮಕ್ಕೆ ನಾಗರಾಜ ನಿಡ್ವಣ್ಣಾಯ ಅವರು ಶ್ರೀರಾಮ ತಾರಕ ಮಂತ್ರದ ದೀಕ್ಷೆ ನೀಡುವ ಮೂಲಕ ಚಾಲನೆ ನೀಡಿದರು. ಹನುಮಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸವಣೂರು ಗ್ರಾಮ ಸಮಿತಿಯ ಅಧ್ಯಕ್ಷ ಮಹೇಶ್ ಕೆ ಸವಣೂರು, ಪ್ರಧಾನ ಕಾರ್ಯದರ್ಶಿ ತಾರನಾಥ ಕಾಯರ್ಗ, ಜಪಯಜ್ಞ ಸಮಿತಿ ಸಂಚಾಲಕ ಗಿರಿಶಂಕರ ಸುಲಾಯ, ಸಹಸಂಚಾಲಕರಾದ ಭರತ್ ರೈ ಪಾಲ್ತಾಡಿ, ಲಿಂಗಪ್ಪ ರೈ ಚೆಂಬುತ್ತೋಡಿ, ರಥಯಾತ್ರಾ ಸಮಿತಿ ಸಂಚಾಲಕ ಚೇತನ್ ಕುಮಾರ್ ಕೋಡಿಬೈಲು, ಲಕ್ಷೋತ್ತರ ನಾರಿಕೇಳ ಸಹಸಂಚಾಲಕ ಪುಟ್ಟಣ್ಣ ಗೌಡ ಬದಿಯಡ್ಕ, ಭಜನಾ ಸಮಿತಿಯ ಸಹಸಂಚಾಲಕ ಶಿವರಾಮ ಗೌಡ ಮೆದು, ಮಹಿಳಾ ಸಮಿತಿ ಸಂಚಾಲಕ ಇಂದಿರಾ ಬಿ ಕೆ, ಸಾಮಾಜಿಕ ಜಾಲತಾಣ ಸಂಚಾಲಕ ಸತೀಶ್ ಬಲ್ಯಾಯ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಚೇತನ ಪಾಲ್ತಾಡಿ, ಶಿಕ್ಷಕಿ ಸರಿತಾ ಡಿ, ಬಾಬು ದೇವಸ್ಯ, ಪ್ರಮೋದ್ ಬೊಳ್ಳಾಜೆ, ಮೋಹಿತ್ ಕುಮಾರಮಂಗಲ, ದಯಾನಂದ ಮೆದು ಸೇರಿದಂತೆ ಹಲವರು ಉಪಸ್ಥಿತರಿದ್ದರು.





