ಅಕ್ರಮ ಕೋಳಿ ಅಂಕಕ್ಕೆ ಪೊಲೀಸರ ದಾಳಿ – ಕೋಳಿ, ಬೈಕ್‌ಗಳನ್ನು ಬಿಟ್ಟು ಆರೋಪಿಗಳು ಪರಾರಿ

ಶೇರ್ ಮಾಡಿ
ಅಕ್ರಮ ಕೋಳಿ ಅಂಕಕ್ಕೆ ಪೊಲೀಸರ ದಾಳಿ – ಕೋಳಿಗಳು, ಬೈಕ್‌ಗಳನ್ನು ಬಿಟ್ಟು ಆರೋಪಿಗಳು ಪರಾರಿ

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಮುರದ ಮೇಲು ಪ್ರದೇಶದಲ್ಲಿ ಮಾ.27ರಂದು ಮುಂಜಾನೆ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ.

ಮುರದಮೇಲು ಪ್ರದೇಶದಲ್ಲಿ ನಡೆದಿದ್ದ ನೇಮೋತ್ಸವದ ಹಿನ್ನೆಲೆ ಕೋಳಿ ಅಂಕವನ್ನು ಏರ್ಪಡಿಸಲಾಗಿತ್ತು ಎಂದು ತಿಳಿದು ಬಂದಿದೆ. ಆದರೆ, ಈ ಕೋಳಿ ಅಂಕಕ್ಕೆ ಯಾವುದೇ ಪೊಲೀಸ್ ಅನುಮತಿ ಪಡೆಯದೇ (ನಿಷೇಧಿತವಾಗಿ) ನಡೆಸಲಾಗುತ್ತಿತ್ತು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡರು.

ಮಾಹಿತಿ ಪಡೆದ ಬೀಟ್ ಪೊಲೀಸ್ ಮಲ್ಲಿಕಾರ್ಜುನ್ ಹಾಗೂ ಇತರ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಚಾನಕ್ ದಾಳಿ ನಡೆಸಿದರು. ಪೊಲೀಸರ ದಾಳಿ ನಡೆಯುತ್ತಿದ್ದಂತೆಯೇ ಕೋಳಿ ಅಂಕದಲ್ಲಿ ತೊಡಗಿದ್ದವರು ಸ್ಥಳದಲ್ಲೇ ಕೋಳಿಗಳು ಹಾಗೂ ಬೈಕ್‌ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರು ಸ್ಥಳದಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕವನ್ನು ಏರ್ಪಡಿಸಿದವರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

error: Content is protected !!