ಸೋಶಿಯಲ್ ಡೆಮೋಕ್ರಟಿಕ್ ಯೂನಿಯನ್ ನೆಲ್ಯಾಡಿ ಘಟಕ

ಶೇರ್ ಮಾಡಿ

 

ಸೋಶಿಯಲ್ ಡೆಮೋಕ್ರಟಿಕ್ ಆಟೋ ಯೂನಿಯನ್ ನೆಲ್ಯಾಡಿ ಘಟಕ

ಅಧ್ಯಕ್ಷ: ನೌಶಾದ್ ದೋಂತಿಲ, ಪ್ರಧಾನ ಕಾರ್ಯದರ್ಶಿ; ರಿಯಾಜ್ ಕೆರೆ, ಕಾರ್ಯದರ್ಶಿ: ರಮೀಜ್ ನೆಲ್ಯಾಡಿ, ಕೋಶಾಧಿಕಾರಿ: ನೌಫಲ್ ದೋಂತಿಲ

ನೆಲ್ಯಾಡಿ: ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್(ಎಸ್‌ಡಿಟಿಯು) ಇದರ ಅಂಗ ಸಂಸ್ಥೆಯಾದ ಸೋಶಿಯಲ್ ಡೆಮೋಕ್ರಟಿಕ್ ಆಟೋ ಯೂನಿಯನ್(ಎಸ್‌ಡಿಎಯು) ಇದರ ನೆಲ್ಯಾಡಿ ಘಟಕದ 2026-27ನೇ ಸಾಲಿನ ಅಧ್ಯಕ್ಷರಾಗಿ ನೌಶಾದ್ ದೋಂತಿಲ ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ರಿಯಾಜ್ ಕೆರೆ, ಕಾರ್ಯದರ್ಶಿಯಾಗಿ ರಮೀಜ್ ನೆಲ್ಯಾಡಿ ಹಾಗೂ ಕೋಶಾಧಿಕಾರಿಯಾಗಿ ನೌಫಲ್ ದೋಂತಿಲ ಆಯ್ಕೆಯಾದರು.

ಏ.21ರಂದು ಹೊಸಮಜಲು ಬಿರ್ವಾ ಸಭಾಂಗಣದಲ್ಲಿ ಸಂಘದ ಹಾಲಿ ಅಧ್ಯಕ್ಷ ನೌಶಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಸಭೆಯಲ್ಲಿ ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಲಾಯಿತು. ಸಂಘದ ಚಟುವಟಿಕೆಗಳು, ಸಾಧನೆಗಳು ಹಾಗೂ ಎದುರಿಸುವ ಸವಾಲುಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಮುಂದಿನ ವರ್ಷಗಳಲ್ಲಿ ಆಟೋ ರಿಕ್ಷಾ ಚಾಲಕ-ಮಾಲಕರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸುವುದು, ಹಕ್ಕುಗಳಿಗಾಗಿ ಹೋರಾಟವನ್ನು ಬಲಪಡಿಸುವುದು ಹಾಗೂ ಸಂಘಟನೆಯನ್ನು ಮತ್ತಷ್ಟು ವಿಸ್ತರಿಸುವ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ದಿನೇ ದಿನೇ ಏರಿಕೆಯಾಗುತ್ತಿರುವ ಗ್ಯಾಸ್ ದರದ ಕುರಿತು ಕಳವಳ ವ್ಯಕ್ತಪಡಿಸಿ, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಏರಿಕೆಯಾಗಿರುವ ಗ್ಯಾಸ್ ದರವನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಪರಿಷ್ಕೃತ ದರಪಟ್ಟಿಯನ್ನು ನಿಗದಿಪಡಿಸಿ, ಅದನ್ನು ಸಭೆಯಲ್ಲಿ ಅನುಮೋದಿಸಲಾಯಿತು. ಚತುಷ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವ ನೆಲ್ಯಾಡಿ ಪೇಟೆಯ ಸರ್ವಿಸ್ ರಸ್ತೆಯನ್ನು ಶಾಶ್ವತವಾಗಿ ಡಾಮರೀಕರಣ ಮಾಡಲು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು. ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.

 

Leave a Reply

error: Content is protected !!