





ನೆಲ್ಯಾಡಿ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಅದರಂತೆ ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ ಕಾಲೇಜು ಸತತ 19 ವರ್ಷದಿಂದ ಶೇ.100 ಫಲಿತಾಂಶವನ್ನು ದಾಖಲಿಸಿಕೊಂಡಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 62 ವಿದ್ಯಾರ್ಥಿಗಳಲ್ಲಿ ರಾಜ್ಯಕ್ಕೆ ಇಬ್ಬರು ವಿದ್ಯಾರ್ಥಿನಿಯರು 10ನೇ ರಾಂಕ್ ಪಡೆದಿದ್ದಾರೆ, 25 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 35 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 02 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿದ್ಯಾಲಯದ ಆಗ್ನೆಸ್ ಮರಿಯ, ಶ್ರೇಯ.ಕೆ 616 ಅಂಕ ಪಡೆದು ರಾಜ್ಯಕ್ಕೆ ಇಬ್ಬರು ವಿದ್ಯಾರ್ಥಿನಿಯರು 10ನೇ ರಾಂಕ್ ಪಡೆದಿದ್ದಾರೆ.
ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು : ಅಲೀನ ಬಿಜು ಜೋನ್ 604, ಕ್ಷಿತಿ ಜೈನ್ 601, ನಿಹಾರಿಕ 598, ಸಾಕ್ಷಿ 596, ಶ್ರೀವಿದ್ಯಾ ಜಿ 588, ಜೆಸ್ಮಾ ಮಾರ್ಟಿನ್ 585, ಪ್ರೀತಮ್ 583, ಆಶಿಕ ಕೆ.ಎನ್ 583, ಆವನಿ ಹೆಚ್ 569, ಪ್ರಜೋಷ್ ಕೆ.ಜೆ, ಏಂಜಲಿನ್ ಆನ್ ಜೋಸೆಫ್ 558, ಜೈನಾಬ್ ಲುಬ್ನ 549, ಸಮನ್ವಿತ್ ಜೆ.ಹೆಚ್ 548, ಸುಧೀಕ್ಷಾ ಎ.ಯು 547, ಫಾತಿಮತ್ ಮಿಸ್ವಾನ 545, ದೃತಿ. ಎಲ್ 543, ಮಾನಸ 542, ಅಂಜನಾ ಪಿ.ಎಸ್ 537,ಇಸಾ ಮರಿಯ 536, ಅಫಿಸಾ 536, ಆಲ್ಬಿನ್ ಎಂ.ಬಿ 533, ಕೆವಿನ್ ಜೊ.ಕೆ ರಂಜನ್ 532 ತೇರ್ಗಡೆಗೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಸಂಸ್ಥೆಯ ಸಂಚಾಲಕ ಹಾಗೂ ಪ್ರಿನ್ಸಿಪಾಲ್ ರೆ.ಫಾ.ಡಾ.ವರ್ಗೀಸ್ ಕೈಪನಡ್ಕ, ಕೋಶಾಧಿಕಾರಿ ಫಾ.ಸ್ಯಾಮುವೆಲ್, ವೈಸ್ ಪ್ರಿನ್ಸಿಪಾಲ್ ಜೋಸ್ ಎಂ.ಜೆ., ಪ್ರೌಢಶಾಲಾ ಮುಖ್ಯಶಿಕ್ಷಕ ಜಾರ್ಜ್ ಕೆ.ಥಾಮಸ್ ಮತ್ತು ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಜೋಸ್ ಪ್ರಕಾಶ್ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.




