





ನೆಲ್ಯಾಡಿ: ಸಂತ ಜಾರ್ಜ್ ನಾಮದಲ್ಲಿ ಪ್ರಸಿದ್ದಿ ಹೊಂದಿರುವ ಕರ್ನಾಟಕದ ಮೊದಲ ಜೋರ್ಜಿಯನ್ ತೀರ್ಥಾಟನಾ ಕೇಂದ್ರವಾಗಿರುವ ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜಾರ್ಜ್ ಅರ್ಥೋಡೋಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬ ಶುಕ್ರವಾರ ಆರಂಭಗೊಂಡಿತು.

ಮೇ 1ರಿಂದ 7ರ ತನಕ ವಾರ್ಷಿಕ ಹಬ್ಬ ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಮೆತ್ರಾಪೋಲೀತ್ತಾ ಹಾಗೂ ತಿರುವನಂತಪುರಂ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಗಬ್ರಿಯೇಲ್ ಮಾರ್ ಗ್ರಿಗೋರಿಯೋಸ್ ಮೆತ್ರಾಪ್ಪೋಲೀತ್ತಾ ಇವರ ಮಹನೀಯ ನೇತೃತ್ವದಲ್ಲಿ ಹಾಗೂ ಅನೇಕ ಧರ್ಮಗುರುಗಳ ಸಹಕಾರದೊಂದಿಗೆ ಅತೀ ವಿಜೃಂಭಣೆಯಿಂದ ಜರುಗಲಿದೆ.
ಮಂಗಳೂರು ಬಿಷಪ್ ಹೌಸ್ ನ ಕಾರ್ಯದರ್ಶಿ ಫಾ.ಕುರಿಯಾ ಕೋಸ್ ತೋಮಸ್ ಪಳ್ಳಿಚೇರ ಅವರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ 7ಕ್ಕೆ ಪ್ರಭಾತ ಪ್ರಾರ್ಥನೆ, 8ರಿಂದ ಪವಿತ್ರ ದಿವ್ಯ ಬಲಿ ಪೂಜೆ, ಸಂತ ಜೋರ್ಜರೊಂದಿಗಿನ ಮಧ್ಯಸ್ಥ ಪ್ರಾರ್ಥನೆ, 9.30ರಿಂದ ಹಬ್ಬದ ಧ್ವಜಾರೋಹಣ ನಡೆಯಿತು. 10ಕ್ಕೆ ಬ್ರಹ್ಮಾವರ ಧರ್ಮಪ್ರಾಂತ್ಯದ ಸಂಡೇ ಸ್ಕೂಲ್ ನ ಉಪಪ್ರಾಚಾರ್ಯ ರೆ.ಫಾ.ಎಲ್ದೊ ಎಂ ಪೌಲ್ ಅವರ ನೇತೃತ್ವದಲ್ಲಿ ಬ್ರಹ್ಮಾವರ ಧರ್ಮಪ್ರಾಂತ್ಯದ ಸಂಡೇ ಸ್ಕೂಲ್ ಅಧ್ಯಾಪಕರ ಮೀಟಿಂಗ್ ನಡೆಯಿತು. 12:30ಕ್ಕೆ ಮಧ್ಯಾಹ್ನದ ಪ್ರಾರ್ಥನೆ ನಡೆಯಿತು. ಸಂಜೆ 6ಕ್ಕೆ ಸಂಧ್ಯಾ ಪ್ರಾರ್ಥನೆ, ಆರ್ಶಿವಾದ, ಅನ್ನಸಂತರ್ಪಣೆ ನಡೆಯಲಿದೆ
ಚರ್ಚ್ ಧರ್ಮಗುರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಡೇ ಸ್ಕೂಲ್ ನ ಅಧ್ಯಕ್ಷ ರೆ.ಫಾ.ವರ್ಗೀಸ್ ತೋಮಸ್, ಕೋರ್ ಎಪಿಸ್ಕೋಪ ರೆ.ಫಾ.ವಿ.ಸಿ.ಮಾಣಿ, ನಾಗಪುರ್ ಸೆಮಿನಾರಿ ರಿಟರ್ನ್ ಪ್ರಾಚಾರ್ಯ ಫಾ.ಬ್ರಿಜೇಶ್ ಫಿಲಿಪ್, ಫಾ.ಸೈಜು ರಂಭಾನ್, ಕೋರ್ ಎಪಿಸ್ಕೋಪ ರೆ.ಫಾ.ಪಿ.ಕೆ ಅಬ್ರಹಾಂ, ಟ್ರಸ್ಟಿ ಉಲಹನ್ನನ್.ಪಿ.ಎಂ., ಸೆಕ್ರೆಟರಿ ಸುನೀಶ್ ಟಿ.ಪಿ, ಸದಸ್ಯರಾದ ಪಿ.ವಿ.ಜೇಕಬ್, ಟಿ.ಪಿ.ಕುರಿಯನ್, ಮೇಹಿಜಾರ್ಜ್, ಜಿ.ತೋಮಸ್, ರೋಯ್ ಟಿ.ಎಂ., ಚಾಕೋ ವಿ.ಎನ್., ಜಾನ್ಸನ್ ಟಿ.ಕೆ., ಜಾನ್ಸನ್ ಸಿ.ಕೆ., ಜೋನ್ ಅಬ್ರಹಾಂ, ಲೆಕ್ಕಪರಿಶೋಧಕರಾಗಿ ಪಿ.ಸಿ.ಪೌಲೋಸ್, ಸಜಿತ ಚಾಕೋ ಹಾಗೂ ದೇವಾಲಯದ ಸದಸ್ಯರು ಉಪಸ್ಥಿತರಿದ್ದರು.



