ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ 28ನೇ ವರ್ಷದ ವಾರ್ಷಿಕೋತ್ಸವ

ಶೇರ್ ಮಾಡಿ

 

ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ 28ನೇ ವರ್ಷದ ವಾರ್ಷಿಕೋತ್ಸವ

ನೆಲ್ಯಾಡಿ: ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಗ್ರಾಮದೇವರಾದ ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ 28ನೇ ವರ್ಷದ ವಾರ್ಷಿಕೋತ್ಸವವು ದೇವಸ್ಥಾನದ ಟ್ರಸ್ಟ್ ಮಾರ್ಗದರ್ಶನದಲ್ಲಿ ಅತ್ಯಂತ ವೈಭವದಿಂದ ನೆರವೇರಿತು.

ಮಹೋತ್ಸವದ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಶ್ರೀ ದೇವರಿಗೆ ರಂಗಪೂಜೆ, ಗಣಪತಿ ದೇವರಿಗೆ ವಿಶೇಷ ಸೇವೆ ಹಾಗೂ ಪಂಜುರ್ಳಿ ದೈವದ ತಂಬಿಲಗಳು ನಡೆಯಿತು. ಅನ್ನಸಂತರ್ಪಣೆ ಹಾಗೂ ಅರ್ಧ ಏಕಾಹ ಭಜನಾ ಕಾರ್ಯಕ್ರಮಗಳು ವಿವಿಧ ಭಜನಾ ಮಂಡಳಿಗಳಿಂದ ಭಕ್ತಿಪೂರ್ವಕವಾಗಿ ಜರುಗಿದವು.

ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ನಾರಾಯಣ ಬಡಿಕ್ಕಿಲ್ಲಾಯ, ಸಹಅರ್ಚಕ ರಾಜಗೋಪಾಲ ಕೆದ್ಲಾಯ ಮತ್ತುಈಶ್ವರ ಭಟ್ ಅವರ ನೇತೃತ್ವದಲ್ಲಿ ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಇದೇ ಸಂದರ್ಭದಲ್ಲಿ ಅನೇಕ ಭಕ್ತರು ವಿಷ್ಣು ಸಹಸ್ರನಾಮ ಪಾರಾಯಣ ನಡೆಸಿದರು.

ಅರ್ಧ ಏಕಾಹ ಭಜನಾ ಕಾರ್ಯಕ್ರಮದಲ್ಲಿ ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ಮಹಿಳಾ ಸಂಕೀರ್ತನ ಮಂಡಳಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪೆರಿಯಡ್ಕ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ತಿರ್ಲೆ, ಶ್ರೀ ರಾಮ ಭಜನಾ ಮಂಡಳಿ ಅಯೋಧ್ಯಾನಗರ ಹಾಗೂ ಪೊರೋಳಿ ತಂಡಗಳು ಕುಣಿತ ಭಜನೆಯ ಮೂಲಕ ಸೇವೆ ಸಲ್ಲಿಸಿದರು. ಜೊತೆಗೆ ಶ್ರೀ ರಕ್ತೇಶ್ವರಿ ಭಜನಾ ಮಂಡಳಿ ಅಗ್ಪಲ-ಕಕ್ಯಪದವು, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಪೆಲತ್ತಿಮಾರು ಮತ್ತು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಮುದ್ಯ ತಂಡಗಳಿಂದ ಸುಮಾರು 130 ಭಕ್ತ ಭಜಕರು ಭಾಗವಹಿಸಿ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ನಿರಂತರ ಅರ್ಧ ಏಕಾಹ ಭಜನೆಯನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಭಜನಾ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಕೇಶವ ಗೌಡ ಅಗರ್ತಿಮಾರು, ಕಾರ್ಯದರ್ಶಿ ಉಮೇಶ್ ಗೌಡ ನೆಕ್ಕರೆ ಅವರನ್ನು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಗೌಡ ನಡ್ಪ, ಉಪಾಧ್ಯಕ್ಷ ಶಿವರಾಮ ಕಾರಂತ ಉರಾಬೆ ಅವರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರ ವೇದಮೂರ್ತಿ ನಾರಾಯಣ ಬಡಿಕ್ಕಿಲ್ಲಾಯ, ಟ್ರಸ್ಟಿಗಳಾದ ದುಗ್ಗಪ್ಪ ಗೌಡ, ಲೋಕೇಶ್ ಗೌಡ, ಕುಶಾಲಪ್ಪ ಗೌಡ, ಸುಮನ ಬಡಿಕ್ಕಿಲ್ಲಾಯ, ಜಗದೀಶ ರಾವ್, ಸುಧಾಕೃಷ್ಣ, ಸುರೇಶ್ ಬಿದಿರಾಡಿ, ಎಲ್ಯಣ್ಣ ಗೌಡ ಹಾಗೂ ಉಪಟ್ರಸ್ಟಿಗಳಾದ ಪ್ರಸನ್ನ ಉರಾಬೆ, ನೋಣಯ್ಯ ಗೌಡ, ಸುಮನ್ ಬಜತ್ತೂರು, ರವೀಂದ್ರ ಒರೊಂಬೋಡಿ, ಯಾದವ ಗೌಡ, ಶಿವರಾಮ ಪ್ರಸಾದ್ ಬಜತ್ತೂರು, ದಿನೇಶ್ ನಡ್ಪ, ಸುನೀತಾ ಮುಕುಂದ ಉಪಸ್ಥಿತರಿದ್ದರು.

ಭಜನಾ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಹೊಸಮನೆ, ಕಾರ್ಯದರ್ಶಿ ದಯಾನಂದ ಅಗರ್ತಿಮಾರು, ಕೋಶಾಧಿಕಾರಿ ಅಕ್ಷಯ್ ಗೌಡತ್ತಿಗೆ, ಕಿಶನ್ ನೆಕ್ಕರೆ, ಭದ್ರಪ್ಪ ಗೌಡ, ಮುಕುಂದ ಗೌಡ ಬಜತ್ತೂರು ಸೇರಿದಂತೆ 400ಕ್ಕೂ ಹೆಚ್ಚು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಉಪನ್ಯಾಸಕ ಮೋಹನ್ ಚಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

Leave a Reply

error: Content is protected !!